ದ್ರೋಣಾಚಾರ್ಯ ಪ್ರಶಸ್ತಿ: ಸತ್ಯನಾರಾಯಣ ಸಹಿತ ಮೂವರ ಹೆಸರು ಶಿಫಾರಸು

Update: 2017-08-05 18:12 GMT

ಹೊಸದಿಲ್ಲಿ, ಆ.5: ಕಳೆದ ವರ್ಷ ನಿಧನರಾದ ಅಥ್ಲೆಟಿಕ್ಸ್ ಕೋಚ್ ರಾಮಕೃಷ್ಣ ಗಾಂಧಿ,ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಟಿ.ಮರಿಯಪ್ಪನ್ ತಂಗವೇಲು ಅವರ ಕೋಚ್ ಸತ್ಯನಾರಾಯಣ ಹಾಗೂ ಕಬಡ್ಡಿ ಕೋಚ್ ಹೀರಾನಂದ ಕಟಾರಿಯಾ ಅವರ ಹೆಸರನ್ನು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಶನಿವಾರ ಶಿಫಾರಸು ಮಾಡಲಾಗಿದೆ.

ಕಳೆದ ವರ್ಷ ಜಪಾನ್‌ನಲ್ಲಿ ನಡೆದ ಏಷ್ಯನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಗುರ್ಮೀತ್ ಸಿಂಗ್, 20 ಮೀ. ನಡಿಗೆಯಲ್ಲಿ ಕಂಚು ಜಯಿಸಿದ್ದ ಬಲ್ಜಿಂದರ್ ಸಿಂಗ್, ಮಣಿಪುರದ ರೇಸ್ ವಾಕರ್ ದೀಪಮಾಲಾದೇವಿ ಸಹಿತ ಹಲವು ಅಥ್ಲೀಟ್‌ಗಳಿಗೆ ಗಾಂಧಿ ತರಬೇತಿ ನೀಡಿದ್ದರು. ದಶಕಗಳ ಕಾಲ ಭಾರತೀಯ ಅಥ್ಲೀಟ್‌ಗಳಿಗೆ ಕೋಚ್ ನೀಡಿದ್ದ ಗಾಂಧಿ ಕಳೆದ ವರ್ಷ ತನ್ನ 55ನೆ ವಯಸ್ಸಿನಲ್ಲಿ ನಿಧನರಾಗಿದ್ದರು.

 ಸತ್ಯನಾರಾಯಣ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಹೈಜಂಪ್‌ನಲ್ಲಿ ಸ್ವರ್ಣದ ಪದಕ ಜಯಿಸಿದ್ದ ಚೆನ್ನೈನ ಪ್ಯಾರಾ ಅಥ್ಲೀಟ್ ಮರಿಯಪ್ಪನ್‌ಗೆ ಮಾರ್ಗದರ್ಶನ ನೀಡಿದ್ದರು. ಕೆಲವೇ ದಿನಗಳ ಹಿಂದೆ ಮರಿಯಪ್ಪನ್ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News