ಅತ್ಯಂತ ವೇಗವಾಗಿ 150 ವಿಕೆಟ್ ಪೂರೈಸಿದ ಜಡೇಜ

Update: 2017-08-05 18:14 GMT

ಕೊಲಂಬೊ, ಆ.5: ಆಲ್‌ರೌಂಡರ್ ರವೀಂದ್ರ ಜಡೇಜ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಅತ್ಯಂತ ವೇಗವಾಗಿ 150 ವಿಕೆಟ್‌ಗಳನ್ನು ಪೂರೈಸಿದ ಭಾರತದ ಎರಡನೆ ಬೌಲರ್ ಎನಿಸಿಕೊಂಡರು. ಸಹ ಆಟಗಾರ ಆರ್.ಅಶ್ವಿನ್ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.

ಮೂರನೆ ದಿನವಾದ ಶನಿವಾರ ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ ಧನಂಜಯ್ ಡಿಸಿಲ್ವಾರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಜಡೇಜ ಈ ಸಾಧನೆ ಮಾಡಿದರು. ಅಶ್ವಿನ್ 29 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಜಡೇಜ ತನ್ನ 32ನೆ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದರು.
ಮಾಜಿ ಸ್ಪಿನ್ ದಿಗ್ಗಜರಾದ ಎರ್ರಪಲ್ಲಿ ಪ್ರಸನ್ನ ಹಾಗೂ ಅನಿಲ್ ಕುಂಬ್ಳೆ 34ನೆ ಟೆಸ್ಟ್‌ನಲ್ಲಿ 150 ವಿಕೆಟ್ ಪೂರೈಸಿದ್ದರು. ಹರ್ಭಜನ್ ಸಿಂಗ್ 35ನೆ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.

ಜಡೇಜ ಅತ್ಯಂತ ವೇಗವಾಗಿ 150 ವಿಕೆಟ್ ಪೂರೈಸಿದ ಭಾರತದ ಮೊದಲ ಎಡಗೈ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿನೂ ಮಂಕಡ್(40 ಟೆಸ್ಟ್),ಬಿಷನ್ ಸಿಂಗ್ ಬೇಡಿ(41 ಟೆಸ್ಟ್) ಹಾಗೂ ರವಿ ಶಾಸ್ತ್ರಿ(78 ಟೆಸ್ಟ್)ಯವರನ್ನು ಹಿಂದಿಕ್ಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News