×
Ad

100 ಮೀ. ಓಟ: ಬೋಲ್ಟ್ ಸೆಮಿ ಫೈನಲ್‌ಗೆ

Update: 2017-08-05 23:46 IST

ಓಟದ ರಾಜ ಖ್ಯಾತಿಯ ಉಸೇನ್ ಬೋಲ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ತನ್ನ ವಿದಾಯದ 100 ಮೀ. ಓಟದ ಸ್ಪರ್ಧೆಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

100 ಮೀ. ಓಟದ ಮೊದಲ ಸುತ್ತಿನ ಹೀಟ್‌ನಲ್ಲಿ 10.07 ನಿಮಿಷದಲ್ಲಿ ಗುರಿ ತಲುಪಿದ ಬೋಲ್ಟ್ ಸೆಮಿಫೈನಲ್‌ಗೆ ತಲುಪಿದ್ದಾರೆ.
ಜಮೈಕಾದ ಓಟಗಾರ ಬೋಲ್ಟ್ 100 ಮೀ. ಓಟದಲ್ಲಿ ನಾಲ್ಕನೆ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.2011ರ ಆವೃತ್ತಿಯನ್ನು ಹೊರತುಪಡಿಸಿ 2009ರ ನಂತರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಉಳಿದೆಲ್ಲಾ ಆವೃತ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.


100 ಮೀ. ಓಟದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಶನಿವಾರ ನಡೆಯಲಿದೆ. ಬೋಲ್ಟ್ 4-100 ಮೀ. ರಿಲೇಯಲ್ಲಿ ಭಾಗವಹಿಸಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಚಾಂಪಿಯನ್‌ಶಿಪ್‌ಗೆ ವಿದಾಯ ಹೇಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News