26ನೆ ಬಾರಿ ಐದು ವಿಕೆಟ್ ಪಡೆದ ಆರ್.ಅಶ್ವಿನ್
Update: 2017-08-05 23:50 IST
ಕೊಲಂಬೊ, ಆ.5: ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್‌ನಲ್ಲಿ ಬೌಲಿಂಗ್‌ನ ಮೂಲಕ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಶ್ರೀಲಂಕಾ ವಿರುದ್ಧ 2ನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 26ನೆ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಕಬಳಿಸಿದ್ದಾರೆ.
ಅನಿಲ್ ಕುಂಬ್ಳೆ(35) ಬಳಿಕ ಗರಿಷ್ಠ ಐದು ವಿಕೆಟ್‌ಗಳನ್ನು ಪಡೆದ ಭಾರತದ ಎರಡನೆ ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಶ್ರೀಲಂಕಾದ ಮೊದಲ ಇನಿಂಗ್ಸ್‌ನಲ್ಲಿ ಕರುಣರತ್ನೆ, ಉಪುಲ್ ತರಂಗ(0), ಆ್ಯಂಜೆಲೊ ಮ್ಯಾಥ್ಯೂಸ್(26), ದಿಲ್‌ರುವಾನ್ ಪೆರೇರ(25) ಹಾಗೂ ವಿಶ್ವ ಫೆರ್ನಾಂಡೊ(0) ವಿಕೆಟ್‌ನ್ನು ಕಬಳಿಸಿದ್ದರು.
16.4 ಓವರ್‌ಗಳಲ್ಲಿ ಮೂರು ಮೇಡನ್ ಓವರ್‌ಗಳ ಸಹಿತ 69 ರನ್ ನೀಡಿದ್ದ ಅಶ್ವಿನ್ ಐದು ವಿಕೆಟ್‌ಗಳನ್ನು ಪಡೆದರು.