ಡೋಪಿಂಗ್ ನಿಯಮ ಉಲ್ಲಂಘನೆ: ಸಾರಾ ಇರಾನಿಗೆ ನಿಷೇಧ
Update: 2017-08-07 23:38 IST
ರೋಮ್, ಆ.7: ಉದ್ದೀಪನಾ ದ್ರವ್ಯ ತಡೆ ನಿಯಮವನ್ನು ಉಲ್ಲಂಘಿಸಿರುವ ಇಟಲಿ ಆಟಗಾರ್ತಿ ಸಾರಾ ಇರಾನಿಗೆ ಎರಡು ತಿಂಗಳ ಕಾಲ ನಿಷೇಧ ಹೇರಲಾಗಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್) ಸೋಮವಾರ ದೃಢಪಡಿಸಿದೆ.
29ರ ಹರೆಯದ ಇರಾನಿ ಫೆಬ್ರವರಿಯಲ್ಲಿ ನಡೆಸಲಾಗಿದ್ದ ಮೂತ್ರ ಮಾದರಿಯ ಪರೀಕ್ಷೆಯಲ್ಲಿ ವಿಶ್ವ ಉದ್ದೀಪನಾ ತಡೆ ಘಟಕದ(ವಾಡಾ)ನಿಷೇಧಿತ ಪಟ್ಟಿಯಲ್ಲಿರುವ ದ್ರವ್ಯ ಸೇವಿಸಿರುವುದು ಸಾಬೀತಾಗಿತ್ತು. ಎಪ್ರಿಲ್ 18 ರಂದು ಇರಾನಿ ವಿರುದ್ಧ ಉದ್ದೀಪನಾ ದ್ರವ್ಯ ತಡೆ ನಿಯಮವನ್ನು ಉಲ್ಲಂಘಿಸಿರುವ ಪ್ರಕರಣ ದಾಖಲಿಸಲಾಗಿತ್ತು. ಸ್ವತಂತ್ರ ಟ್ರಿಬ್ಯೂನಲ್ ಮುಂದೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿತ್ತು.