×
Ad

ಶಾಟ್‌ಪುಟ್: ನ್ಯೂಝಿಲೆಂಡ್‌ನ ಥಾಮಸ್ ವಾಲ್ಶ್‌ಗೆ ಸ್ವರ್ಣ

Update: 2017-08-07 23:57 IST

ಲಂಡನ್, ಆ.7: ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಶಾಟ್‌ಪುಟ್ ಫೈನಲ್‌ನಲ್ಲಿ ನ್ಯೂಝಿಲೆಂಡ್‌ನ ಥಾಮಸ್ ವಾಲ್ಶ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ತನ್ನ ದೇಶಕ್ಕೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ.

 ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ವಾಲ್ಶ್ ಅಂತಿಮ ಯತ್ನದಲ್ಲಿ 22.03 ಮೀ. ದೂರ ಶಾಟ್‌ಪುಟ್‌ನ್ನು ಎಸೆದಿದ್ದರು. ಮೂರನೆ ಯತ್ನದಲ್ಲೇ 21.75 ಮೀ. ದೂರ ಶಾಟ್‌ಪುಟ್‌ನ್ನು ಎಸೆದಿದ್ದ ವಾಲ್ಳ್ ಚಿನ್ನದ ಪದಕ ದೃಢಪಡಿಸಿದ್ದರು. ‘‘ಶಾಟ್‌ಪುಟ್‌ಎಸೆತದಲ್ಲಿ ತೀವ್ರ ಪೈಪೋಟಿ ಇತ್ತು. ವಿಶ್ವ ಚಾಂಪಿಯನ್ ಆಗುವ ಕನಸು ಈಡೇರಿದ್ದಕ್ಕೆ ಸಂತೋಷವಾಗುತ್ತಿದೆ’’ ಎಂದು ವಾಲ್ಶ್ ಪ್ರತಿಕ್ರಿಯಿಸಿದರು.

ನ್ಯೂಝಿಲೆಂಡ್‌ನ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ವಲೆರಿ ಆಡಮ್ಸ್ ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ. ಚಿನ್ನ ಜಯಿಸಿರುವ ವಾಲ್ಶ್ ಅವರು ಆಡಮ್ಸ್ ಅನುಪಸ್ಥಿತಿ ಕಾಡದಂತೆ ಉತ್ತಮ ಪ್ರದರ್ಶನ ನೀಡಿದರು. ಅಮೆರಿಕದ ಜೋ ಕೊವಾಕ್ಸ್ 21.66 ಮೀ. ದೂರ ಎಸೆದು ಬೆಳ್ಳಿ ಪದಕ ಜಯಿಸಿದರು. 21.46 ಮೀ. ದೂರ ಶಾಟ್‌ಪುಟ್‌ನ್ನು ಎಸೆದಿರುವ ಕ್ರೊಯೇಷಿಯದ ಸ್ಟೈಪ್ ಝುನಿಕ್ ಕಂಚಿಗೆ ತೃಪ್ತಿಪಟ್ಟರು. ಮೊದಲ ಬಾರಿ ಸೀನಿಯರ್ ಮಟ್ಟದಲ್ಲಿ ಪದಕ ಜಯಿಸಿದ 26ರ ಹರೆಯದ ಝನಿಕ್‌ಲಂಡನ್ ಸ್ಟೇಡಿಯಂನಲ್ಲಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News