ಸಾಹಸ ಪ್ರದರ್ಶಿಸುವ ವೇಳೆ ಕುತ್ತಿಗೆ ಮುರಿದು ಸಾವನ್ನಪ್ಪಿದ ದೇಹದಾರ್ಢ್ಯ ಚಾಂಪಿಯನ್

Update: 2017-08-11 13:14 GMT

ಹೊಸದಿಲ್ಲಿ, ಆ.11: ಸ್ಪರ್ಧೆಯೊಂದರಲ್ಲಿ ಬ್ಯಾಕ್ ಫ್ಲಿಪ್ (ತಲೆ ಕೆಳಗಾಗಿ ಹಾರುವ ಸಾಹಸ) ಮಾಡಲು ಹೋಗಿ ಕತ್ತು ಮುರಿದುಕೊಂಡ ಆಫ್ರಿಕಾದ ದೇಹದಾರ್ಢ್ಯ ಚಾಂಪಿಯನ್ ಒಬ್ಬರು ಮೃತಪಟ್ಟಿದ್ದಾರೆ.

ಐಎಫ್ ಬಿಬಿ ಜೂನಿಯರ್ ವಿಶ್ವ ಚಾಂಪಿಯನ್ ಸಿಫಿಸೋ ಲಂಗೆಲೋ ತಬೆಟೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸ್ಪರ್ಧೆಯಲ್ಲಿ ಸಾಹಸ ಪ್ರದರ್ಶಿಸುವ ಸಂದರ್ಭ ಮೃತಪಟ್ಟ ಬಾಡಿ ಬಿಲ್ಡರ್ ಆಗಿದ್ದಾರೆ.

ಸ್ಪರ್ಧೆಯಲ್ಲಿ ತಮ್ಮ ದೇಹದಾರ್ಡ್ಯವನ್ನು ಪ್ರದರ್ಶಿಸುತ್ತಾ ಮ್ಯಾಟ್ ನಿಂದ ಮೇಲೆ ನೆಗೆಯುವ ತಬೆಟೆ ನೆಲಕ್ಕೆ ಬೀಳುತ್ತಾರೆ. ಈ ಸಂದರ್ಭ ಅವರ ಕುತ್ತಿಗೆ ಬಲವಾಗಿ ನೆಲಕ್ಕೆ ಬಡಿಯುತ್ತದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

“ಸಿಸಿಫೋ ಲಂಗೆಲೋ ತಬೆಟೋ ಅವರ ಅಕಾಲಿಕ ನಿಧನದಿಂದ ದೇಹದಾರ್ಢ್ಯ ಪಟುಗಳು ಆಘಾತಕ್ಕೊಳಗಾಗಿದ್ದಾರೆ” ಎಂದು ದಕ್ಷಿಣ ಆಫ್ರಿಕಾದ ಬಾಡಿ ಬಿಲ್ಡಿಂಗ್ ಮ್ಯಾಗಝಿನ್ ‘ಮಸಲ್ ಇವೊಲ್ಯೂಶನ್’ ಸಂತಾಪ ಸೂಚಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News