ಒಂದೇ ಓವರ್‌ನಲ್ಲಿ ಆರು ವಿಕೆಟ್ !

Update: 2017-08-11 18:18 GMT

ಲಂಡನ್, ಆ.11: ಇಂಗ್ಲೆಂಡ್‌ನ 13ರ ಹರೆಯದ ಶಾಲಾ ಕ್ರಿಕೆಟಿಗ ಆರು ಎಸೆತಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದು, ಎಲ್ಲ ವಿಕೆಟ್‌ಗಳನ್ನು ಕ್ಲೀನ್ ಬೌಲ್ಡ್ ಮೂಲಕ ಪಡೆದು ಅಪೂರ್ವ ಸಾಧನೆ ಮಾಡಿದ್ದಾರೆ.

 ಫಿಲಾಡೆಲ್‌ಫಿಯಾ ಕ್ರಿಕೆಟ್ ಕ್ಲಬ್‌ನ ಅಂಡರ್-13 ತಂಡದಲ್ಲಿ ಲೂಕ್ ರಾಬಿನ್ಸನ್ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ರಾಬಿನ್ಸನ್‌ನ ಈ ಅಮೋಘ ಸಾಧನೆಗೆ ಕುಟುಂಬದ ಸದಸ್ಯೆರಲ್ಲರೂ ಪ್ರತ್ಯಕ್ಷ ಸಾಕ್ಷಿಗಳಾಗಿದ್ದು ವಿಶೇಷವಾಗಿತ್ತು. ರಾಬಿನ್ಸನ್ ತಂದೆ ಸ್ಟೀಫನ್ ಅದೇ ಪಂದ್ಯದಲ್ಲಿ ಅಂಪೈರ್ ಆಗಿದ್ದರು. ತಾಯಿ ಹೆಲೆನ್ ಸ್ಕೋರ್ ದಾಖಲೆಯನ್ನು ರೆಕಾರ್ಡ್ ಮಾಡಿದರು. ರಾಬಿನ್ಸನ್‌ರ ತಮ್ಮ ಮ್ಯಾಥ್ಯೂ ಫೀಲ್ಡಿಂಗ್ ಮಾಡುತ್ತಿದ್ದರೆ, ಅಜ್ಜ ಗ್ಲೆನ್ ಪಂದ್ಯವನ್ನು ವೀಕ್ಷಿಸುತ್ತಿದ್ದರು.

‘‘ನಾನು 30 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೆ. ಹ್ಯಾಟ್ರಿಕ್ ವಿಕೆಟ್ ಪಡೆದಿದ್ದೆ. ಆದರೆ, ಇಂತಹ ಸಾಧನೆಯನ್ನು ನೋಡಿಲ್ಲ. ಇದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ’’ ಎಂದು ಸ್ಟೀಫನ್ ರಾಬಿನ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News