ಟೆಸ್ಟ್‌ನಲ್ಲಿ ಸತತ 7 ಅರ್ಧಶತಕಗಳ ವಿಶ್ವದಾಖಲೆ ಸರಿಗಟ್ಟಿದ ರಾಹುಲ್

Update: 2017-08-12 13:44 GMT

 ಪಲ್ಲೆಕೆಲೆ, ಆ.12: ಭಾರತ ಕ್ರಿಕೆಟ್ ತಂಡದ ಆರಂಭಿಕ ದಾಂಡಿಗ ಕರ್ನಾಟಕದ ಲೋಕೇಶ್ ರಾಹುಲ್ ಶ್ರೀಲಂಕಾ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನವಾಗಿರುವ ಶನಿವಾರ ಶತಕ ವಂಚಿತಗೊಂಡರು. ಆದರೆ ಟೆಸ್ಟ್‌ನಲ್ಲಿ ಸತತ 7 ಅರ್ಧಶತಕಗಳ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

5 ಮಂದಿ 7 ಅರ್ಧಶತಕಗಳ ಸಾಧನೆ ಮಾಡಿದ್ದರು. ಸರ್ ಎವರ್ಟನ್ ವೀಕ್ಸ್(1948-49), ಶಿವನಾರಾಯಣ್ ಚಂದ್ರಪಾಲ್ (2000-01), ಆ್ಯಂಡಿ ಫ್ಲೆವೆರ್(2006-07), ಕುಮಾರ ಸಂಗಕ್ಕರ (2013-14), ಮತ್ತು ಕ್ರಿಸ್ ರೋಜರ್ಸ್‌(2014-15) ಟೆಸ್ಟ್‌ನಲ್ಲಿ ಸತತ 7 ಅರ್ಧಶತಕಗಳ ವಿಶ್ವದಾಖಲೆ ನಿರ್ಮಿಸಿದ್ದರು.

   ಲೋಕೇಶ್ ರಾಹುಲ್ 85 ರನ್ ಗಳಿಸಿ ಔಟಾದರು. ಅವರು ತನ್ನ 19ನೆ ಟೆಸ್ಟ್‌ನಲ್ಲಿ 67 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 9ನೆ ಅರ್ಧಶತಕ ಪೂರ್ಣಗೊಳಿಸಿದರು. ರಾಹುಲ್ 7 ಅರ್ಧಶತಕಗಳ ದಾಖಲೆಯೊಂದಿಗೆ 6 ಅರ್ಧಶತಕಗಳನ್ನು ದಾಖಲಿಸಿದ್ದ ಕರ್ನಾಟಕದ ಜಿ. ವಿಶ್ವನಾಥ ಮತ್ತು ರಾಹುಲ್ ದ್ರಾವಿಡ್ ದಾಖಲೆಯನ್ನು ಹಿಂದಿಕ್ಕಿದರು.

 ರಾಹುಲ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 188 ರನ್‌ಗಳ ಜೊತೆಯಾಟ ನೀಡುವ ಮೂಲಕ ದಾಖಲೆ ನಿರ್ಮಿಸಿದರು. ಈ ಹಿಂದೆ 1993ರಲ್ಲಿ ನವಜೋತ್ ಸಿಂಗ್ ಸಿದ್ದು ಮತ್ತು ಮನೋಜರ್ ಪ್ರಭಾಕರ್ 171 ರನ್‌ಗಳ ಜೊತೆಯಾಟ ನೀಡಿದ್ದರು. ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News