ರೆಫರಿಯನ್ನು ತಳ್ಳಿದ ರೊನಾಲ್ಡೊಗೆ ಐದು ಪಂದ್ಯಗಳ ನಿಷೇಧ

Update: 2017-08-14 15:25 GMT

ನ್ಯೂ ಕ್ಯಾಂಪ್, ಆ.14: ಸ್ಪಾನಿಶ್ ಸೂಪರ್ ಕಪ್‌ನ ವೇಳೆ ರೆಡ್ ಕಾರ್ಡ್ ತೋರಿಸಿದ ರೆಫರಿಯನ್ನು ತಳ್ಳಿದ ಕ್ರಿಸ್ಟಿಯಾನೊ ರೊನಾಲ್ಡೊಗೆ ಐದು ಪಂದ್ಯಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ ಎಂದು ಸ್ಪಾನೀಶ್ ಫುಟ್ಬಾಲ್ ಫೆಡರೇಶನ್(ಆರ್‌ಎಫ್‌ಇಎಫ್) ಸೋಮವಾರ ತಿಳಿಸಿದೆ.

 ಪಂದ್ಯದಲ್ಲಿ 2ನೆ ಗೋಲು ಬಾರಿಸಿದ ಸಂಭ್ರಮದಲ್ಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ ರೊನಾಲ್ಡೊಗೆ ಮ್ಯಾಚ್ ರೆಫರಿ ರಿಕಾರ್ಡೊ ಡಿ ಬರ್ಗೊಸ್ ಹಳದಿ ಕಾರ್ಡ್ ನೀಡಿದರು. ಎದುರಾಳಿ ಆಟಗಾರ ಸ್ಯಾಮುಯೆಲ್ ಉಮ್‌ಟಿಟಿ ಸವಾಲಿಗೆ ಉತ್ತರವಾಗಿ ಪೆನಾಲ್ಟಿ ಏರಿಯಾ ಪ್ರವೇಶಿಸಿದ ರೊನಾಲ್ಡೊ ಮತ್ತೊಮ್ಮೆ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ರೆಫರಿ ಕೆಂಪುಕಾರ್ಡ್ ನೀಡಿದರು. ಇದರಿಂದ ಕೋಪಗೊಂಡ ರೊನಾಲ್ಡೊ ರೆಫರಿಯನ್ನು ತಳ್ಳಿದರು.

ರೊನಾಲ್ಡೊಗೆ 3,005 ಯುರೋ(3,543.20ಯುಎಸ್ ಡಾಲರ್)ದಂಡ,ರೆಫರಿಯನ್ನು ತಳ್ಳಿದ್ದಕ್ಕೆ ನಾಲ್ಕು ಪಂದ್ಯಗಳಿಂದ ಅಮಾನತು ಹಾಗೂ ರೆಡ್ ಕಾರ್ಡ್ ಪಡೆದಿರುವುದಕ್ಕೆ ಮತ್ತೊಂದು ಪಂದ್ಯದಿಂದ ನಿಷೇಧಕ್ಕೊಳಗಾಗಿದ್ದಾರೆ ಎಂದು ಆರ್‌ಎಫ್‌ಇಎಫ್ ತಿಳಿಸಿದೆ.

 ರೊನಾಲ್ಡೊ ಅವರ ಆಕರ್ಷಕ ಗೋಲಿನ ನೆರವಿನಿಂದ ಮ್ಯಾಡ್ರಿಡ್ ತಂಡ ಬಾರ್ಸಿಲೋನ ವಿರುದ್ಧ ರವಿವಾರ ರಾತ್ರಿ ನಡೆದ ಸೂಪರ್‌ಕಪ್ ಪಂದ್ಯದಲ್ಲಿ 2-1 ಅಂತರದಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News