ಬಿಸಿಸಿಐ ಉನ್ನತ ಪದಾಧಿಕಾರಿಗಳ ಖರ್ಚು-ವೆಚ್ಚ ಕೇಳಿದರೆ ಅಚ್ಚರಿಯಾಗುವುದು ಖಚಿತ

Update: 2017-08-17 11:33 GMT

 ಹೊಸದಿಲ್ಲಿ, ಆ.17: ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ(ಸಿಎಸಿ) ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ತನ್ನ ಐದನೆ ವರದಿಯಲ್ಲಿ ಬಿಸಿಸಿಐ ಪದಾಧಿಕಾರಿಗಳ ಖರ್ಚು-ವೆಚ್ಚಗಳನ್ನು ಬಹಿರಗಂಗಪಡಿಸಿದೆ. ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಖಜಾಂಚಿ ಅನಿರುದ್ಧ್ ಚೌಧರಿ ಕ್ರಮವಾಗಿ 1.56 ಕೋ.ರೂ. ಹಾಗೂ 1.71 ಕೋ.ರೂ. ಖರ್ಚು ಮಾಡಿದ್ದಾರೆ. ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಒಂದು ಪೈಸೆಯನ್ನು ಪಡೆದಿಲ್ಲ ಎಂದು ಸಿಎಸಿ ತನ್ನ ವರದಿಯಲ್ಲಿ ತಿಳಿಸಿದೆ.

ಬಿಸಿಸಿಐನ ಇಬ್ಬರು ಪ್ರಮುಖ ಪದಾಧಿಕಾರಿಗಳ ಖರ್ಚುವೆಚ್ಚ ಎಲ್ಲರ ಹುಬ್ಬೇರಿಸಿದೆ.
 ಸಿಎಸಿ 2015-16, 2016-17 ಹಣಕಾಸು ವರ್ಷ, 2017ರ ಎಪ್ರಿಲ್‌ನಿಂದ ಜೂನ್ ವರೆಗಿನ ಖರ್ಚು-ವೆಚ್ಚವನ್ನು ವರದಿಯಲ್ಲಿ ನಮೂದಿಸಿದೆ.
ರಾಂಚಿ ಮೂಲದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಹಾಲಿ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ವಿಮಾನ ಟಿಕೆಟ್‌ಗಳಿಗೆ 65 ಲಕ್ಷ ರೂ. ಹಾಗೂ ಟಿಎ ಹಾಗೂ ಡಿಎಗೆ 42.25 ಲಕ್ಷ ರೂ.ವನ್ನು ಬಿಸಿಸಿಐಯಿಂದ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಿದ್ದ ಸಂದರ್ಭದಲ್ಲಿ ವಿದೇಶಿ ವಿನಿಮಯಕ್ಕಾಗಿ 29 ಲಕ್ಷ ರೂ. ಸ್ವೀಕರಿಸಿದ್ದರು. ಹೊಟೇಲ್ ಇತರ ಖರ್ಚಿಗೆ 13.51 ಲಕ್ಷ ರೂ., ಕಚೇರಿ ಖರ್ಚು 3.92 ಲಕ್ಷ ರೂ. ಹೆಚ್ಚುವರಿ 1.31 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಎರಡು ಹಣಕಾಸು ವರ್ಷ ಹಾಗೂ ಹಾಲಿ ವರ್ಷದಲ್ಲಿ ಒಟ್ಟು 1.56 ಕೋ.ರೂ.ಖರ್ಚು ಮಾಡಿದ್ದಾರೆ.
 ಖಜಾಂಚಿ ಅನಿರುದ್ಧ್ ವಿಮಾನ ಟಿಕೆಟ್‌ಗಳಿಗೆ 60.29 ಲಕ್ಷ ರೂ., ಟಿಎ-ಡಿಎ 75 ಲಕ್ಷ ರೂ. ವಿದೇಶಿ ವಿನಿಮಯಕ್ಕೆ 17.64 ಲಕ್ಷ ರೂ. ವಸತಿ ಶುಲ್ಕ 11 ಲಕ್ಷ ರೂ., ಟೆಲಿಫೋನ್‌ಗೆ 3.41 ಲಕ್ಷ ರೂ,2.37 ಲಕ್ಷ ರೂ. ಖರ್ಚು ಮಾಡಿದ್ದರು. ಒಟ್ಟಾರೆ 1.71 ಕೋ.ರೂ. ಖರ್ಚು ಮಾಡಿದ್ದಾರೆ.
ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್, ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಇದೇ ಅವಧಿಯಲ್ಲಿ ಕ್ರಮವಾಗಿ 24 ಲಕ್ಷ ಹಾಗೂ 6.52 ಲಕ್ಷ ರೂ. ಖರ್ಚು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News