ಐಸಿಸಿ ಏಕದಿನ ರ‍್ಯಾಂಕಿಂಗ್‌: ಅಗ್ರ ಸ್ಥಾನ ಕಾಯ್ದುಕೊಂಡ ಕೊಹ್ಲಿ

Update: 2017-08-18 18:03 GMT

ದುಬೈ, ಆ.18: ಭಾರತದ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ ಬಿಡುಗಡೆಯಾದ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಏಕದಿನ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ಪ್ರಸ್ತುತ 873 ಅಂಕ ಹೊಂದಿರುವ ಕೊಹ್ಲಿ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ಗಿಂತ 12 ಅಂಕದಿಂದ ಮುಂದಿದ್ದಾರೆ. ರವಿವಾರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ವೇಳೆ ಕೊಹ್ಲಿಗೆ ಅಂಕವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶವಿದೆ. ಅಗ್ರ-15ರಲ್ಲಿರುವ ಭಾರತದ ಇತರ ಬ್ಯಾಟ್ಸ್‌ಮನ್‌ಗಳೆಂದರೆ: ಮಾಜಿ ನಾಯಕ ಎಂ.ಎಸ್. ಧೋನಿ(12ನೆ ರ್ಯಾಂಕ್), ಶಿಖರ್ ಧವನ್(13ನೆ) ಹಾಗೂ ಉಪ ನಾಯಕ ರೋಹಿತ್ ಶರ್ಮ(14ನೆ).

ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಭಾರತದ ಯಾವ ಬೌಲರ್ ಕೂಡ ಇಲ್ಲ. ವೇಗಿ ಭುವನೇಶ್ವರ ಕುಮಾರ್(13ನೆ) ಅಗ್ರ-15ರಲ್ಲಿ ಏಕೈಕ ಬೌಲರ್ ಆಗಿದ್ದಾರೆ. ಏಕದಿನ ಟೀಮ್ ರ‍್ಯಾಂಕಿಂಗ್‌ನಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಮುಂಬರುವ ಶ್ರೀಲಂಕಾ ವಿರುದ್ಧ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡರೆ 3ನೆ ಸ್ಥಾನ ಕಾಯ್ದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News