×
Ad

ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್‌ಗೆ

Update: 2017-08-18 23:47 IST

ಸಿನ್ಸಿನಾಟಿ, ಆ.18: ಭಾರತದ ರೋಹನ್ ಬೋಪಣ್ಣ ಹಾಗೂ ಕ್ರೊಯೇಷಿಯದ ಇವಾನ್ ಡೊಡಿಗ್ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಬೋಪಣ್ಣ-ಡೊಡಿಗ್ ಇಲ್ಲಿ ಗುರುವಾರ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಕೊಲಂಬಿಯ-ಇಟಲಿ ಜೋಡಿ ಜುವಾನ್ ಸೆಬಾಸ್ಟಿಯನ್ ಹಾಗೂ ಫ್ಯಾಬಿಯೊ ಫೊಗ್ನಿನಿ ಅವರನ್ನು 5-7, 7-5, 10-8 ಸೆಟ್‌ಗಳಿಂದ ಮಣಿಸಿದ್ದಾರೆ. ಬೋಪಣ್ಣ ಜೋಡಿ ಮುಂದಿನ ಸುತ್ತಿನಲ್ಲಿ ಬ್ರೆಝಿಲ್‌ನ ಮಾರ್ಸೆಲೊ ಮೆಲೊ ಹಾಗೂ ಪೊಲೆಂಡ್‌ನ ಲುಕಾಝ್ ಕುಬೊಟ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News