ಮೊದಲ ಏಕದಿನ: ಭಾರತದ ಗೆಲುವಿಗೆ 217 ರನ್‌ಗಳ ಗುರಿ

Update: 2017-08-20 12:45 GMT

ಡಂಬುಲಾ, ಆ.20: ಇಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೆಲುವಿಗೆ 217 ರನ್‌ಗಳ ಸವಾಲು ಪಡೆದಿದೆ.

ರಂಗಿರಿಯ ಡಂಬುಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಇಂದು ಟಾಸ್ ಜಯಿಸಿ ಶ್ರೀಲಂಕಾವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು.

ಭಾರತದ ಅಕ್ಷರ್ ಪಟೇಲ್(34ಕ್ಕೆ3), ಕೇದಾರ್ ಜಾಧವ್(26ಕ್ಕೆ2), ಯಝ್ವೇಂದರ್ ಚಾಹಲ್(60ಕ್ಕೆ2), ಜಸ್‌ಪ್ರೀತ್ ಬುಮ್ರಾ(22ಕ್ಕೆ 2) ದಾಳಿಗೆ ಸಿಲುಕಿ ಶ್ರೀಲಂಕಾ 43.2 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲೌಟಾಗಿದೆ.

 ಶ್ರೀಲಂಕಾದ ಆರಂಭಿಕ ದಾಂಡಿಗ ನಿರೋಶನ್ ಡಿಕ್ವೆಲ್ಲಾ(64) ಅರ್ಧಶತಕ ದಾಖಲಿಸಿದರು. ಧನುಶ್ಕ ಗುಣತಿಲಕ(35), ಕುಶಾಲ್ ಮೆಂಡೀಸ್(36), ಉಪುಲ್ ತರಂಗ್(13) ಮತ್ತು ಆ್ಯಂಜೆಲೊ ಮ್ಯಾಥ್ಯೂಸ್(ಔಟಾಗದೆ 36) ಎರಡಂಕಿಯ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News