ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಭಾರತದ ಕುಸ್ತಿಪಟುಗಳ ಕಳಪೆ ಆರಂಭ

Update: 2017-08-21 18:27 GMT

ಪ್ಯಾರಿಸ್, ಆ.21: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೊ -ರೋಮನ್ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಯೋಗೀಶ್, ಗುರ್‌ಪ್ರೀತ್ ಸಿಂಗ್, ರವೀಂದರ್ ಖಟ್ರಿ ಮತ್ತು ಹಾರ್ದಿಪ್ ಸೋಲು ಅನುಭವಿಸುವುದರೊಂದಿಗೆ ಭಾರತದ ಕುಸ್ತಿ ಪಟುಗಳು ಮೊದಲ ದಿನ ಕಳಪೆ ಪ್ರದರ್ಶನ ನೀಡಿದ್ದಾರೆ.

71 ಕೆ.ಜಿ ವಿಭಾಗದಲ್ಲಿ ಯೋಗೀಶ್ ಅವರು ಟಾಕೆಶಿ ಇಝ್ಮಿ ವಿರುದ್ಧ 1-3 ಅಂತರದಲ್ಲಿ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದರು.

 75 ಕೆ.ಜಿ. ವಿಭಾಗದಲ್ಲಿ ಗುರ್‌ಪ್ರೀತ್ ಸಿಂಗ್ ಅವರು ಜಾರ್ಜಿಯಾದ ಮಿಲಾಂದ್ ಸುಲುಕಿಝೆ ವಿರುದ್ಧ 1-5 ಅಂತರದಲ್ಲಿ ಶರಣಾದರು.

    ರವೀಂದರ್ ಅವರು 85 ಕೆ.ಜಿ.ವಿಭಾಗದಲ್ಲಿ ಹಂಗೇರಿಯ ವಿಕ್ಟರ್ ಲೊರಿಂಕಾ ವಿರುದ್ಧ 0-8 ಅಂತರದಲ್ಲಿ ಸೋಲುಂಡರು ಮತ್ತು ಹಾರ್ದಿಪ್ ಅವರು ಲಿಥುವೇನಿಯಾದ ವಿಲುಯುಸ್ ಲೌರಿನೈಟಿಸ್ ವಿರುದ್ಧ 2-5 ಅಂತರದಲ್ಲಿ ಶರಣಾದರು. ಭಾರತದ ಕುಸ್ತಿಪಟುಗಳ ವಿರುದ್ಧ ಜಯ ಗಳಿಸಿದ ನಾಲ್ವರು ಕುಸ್ತಿಪಟುಗಳು ಒಂದು ವೇಳೆ ಫೈನಲ್‌ಗೆ ತೇರ್ಗಡೆಯಾದರೆ ಸೋಲು ಅನುಭವಿಸಿರುವ ಭಾರತದ ಕುಸ್ತಿಪಟುಗಳಿಗೆ ರೆಪಿಚೇಜ್ ಸುತ್ತಿನಲ್ಲಿ ಕಂಚು ಪಡೆಯಲು ಹಣಾಹಣಿ ನಡೆಸುವ ಅವಕಾಶ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News