ಬಿಡಬ್ಲ್ಯುಎಫ್ ವಿಶ್ವ ಜೂ. ಚಾಂಪಿಯನ್‌ಶಿಪ್: ಲಕ್ಷ ಸೇನ್ ಭಾರತದ ನಾಯಕ

Update: 2017-08-22 18:25 GMT

ಹೊಸದಿಲ್ಲಿ, ಆ.22: ಜೂನಿಯರ್ ಬ್ಯಾಡ್ಮಿಂಟನ್‌ನ ವಿಶ್ವದ ನಂ.1 ಆಟಗಾರ, ಕಳೆದ ವಾರ ಬಲ್ಗೇರಿಯ ಓಪನ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಜಯಿಸಿದ್ದ ಲಕ್ಷ ಸೇನ್ ಅಕ್ಟೋಬರ್‌ನಲ್ಲಿ ಜಕಾರ್ತದಲ್ಲಿ ಆರಂಭವಾಗಲಿರುವ ಬಿಡಬ್ಲುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಹಾಗೂ ಏಷ್ಯಾಕಪ್‌ನಲ್ಲಿ ಭಾರತದ ಅಂಡರ್ 17 ಹಾಗೂ ಅಂಡರ್-15 ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಅಂಡರ್-17 ವಿಭಾಗದಲ್ಲಿ ಭಾರತದ ನಂ.1 ಆಟಗಾರ ಮೈಸಮ್ ಮೀರಾಬಾ ಮ್ಯಾನ್ಮಾರ್‌ನಲ್ಲಿ ಅಕ್ಟೋಬರ್ 4 ರಿಂದ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಷ್ಯಾ ಅಂಡರ್-17 ಹಾಗೂ ಅಂಡರ್-15 ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲವನ್ನು ಮುನ್ನಡೆಸಲಿದ್ದಾರೆ. ಕಳೆದ ವಾರ ನಡೆದ ಸಭೆಯಲ್ಲಿ ಬಿಎಐ ಕಾರ್ಯದರ್ಶಿ ಅನೂಪ್ ನಾರಂಗ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು 64 ಆಟಗಾರರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿತ್ತು.

ಮಣಿಪುರದ ಮಿರಾಬಾಗೆ ಉತ್ತರಖಂಡದ ಧುೃವ್ ರಾವತ್, ಆಂಧ್ರದ ಆಕಾಶ್ ಯಾದವ್ ಹಾಗೂ ಅಸ್ಸಾಂನ ಇಮಾನ್ ಸೊನೊವಾಲ್ ಅಂಡರ್-17 ಸ್ಪರ್ಧೆಯಲ್ಲಿ ಸಾಥ್ ನೀಡುತ್ತಿದ್ದಾರೆ. ಈ ನಾಲ್ವರು ರಾಷ್ಟ್ರ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಬಿಡಬ್ಲುಎಫ್ ಜೂನಿಯರ್ ಚಾಂಪಿಯನ್‌ಶಿಪ್‌ಗೆ ಬಾಲಕರ ತಂಡ: ಲಕ್ಷ ಸೇನ್, ರಾಹುಲ್ ಭಾರದ್ವಾಜ್, ಕಾರ್ತಿಕೇಯ ಗುಲ್ಶನ್ ಕುಮಾರ್, ಆರ್ಯಮಾನ್ ಟಂಡನ್, ಧುೃವ್ ಕಪಿಲಾ, ಕೃಷ್ಣ ಪ್ರಸಾದ್, ಸಂಜಯ್, ಸಿದ್ದಾರ್ಥ್, ಕೃಷ್ಣಸಾಯಿ, ಡಿಂಕು ಸಿಂಗ್, ಮಂಜಿತ್ ಸಿಂಗ್. ಎಡಿ ಗುಪ್ತಾ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News