ಏಕದಿನ ಪಂದ್ಯದಲ್ಲಿ ಸ್ಟಂಪಿಂಗ್ ದಾಖಲೆ ಸರಿಗಟ್ಟಿದ ಧೋನಿ
ಪಲ್ಲೆಕೆಲೆ, ಆ.24: ಶ್ರೀಲಂಕಾ ವಿರುದ್ಧ ಗುರುವಾರ ಇಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಗರಿಷ್ಠ ಸ್ಟಂಪಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 99ನೆ ಬಾರಿ ಸ್ಟಂಪಿಂಗ್ ಮಾಡಿರುವ 36ರ ಹರೆಯದ ಧೋನಿ ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕರ ದಾಖಲೆಯನ್ನು ಸರಿದೂಗಿಸಿದರು. 298ನೆ ಏಕದಿನ ಪಂದ್ಯವನ್ನಾಡುತ್ತಿರುವ ಧೋನಿ ಶ್ರೀಲಂಕಾ ಇನಿಂಗ್ಸ್‌ನ 14ನೆ ಓವರ್‌ನಲ್ಲಿ ಚಾಹಲ್ ಬೌಲಿಂಗ್‌ನಲ್ಲಿ ದನುಷ್ಕಾ ಗುಣತಿಲಕರನ್ನು ಸ್ಟಂಪಿಂಗ್ ಮಾಡುವುದರೊಂದಿಗೆ ಈ ಸಾಧನೆ ಮಾಡಿದರು.
ಮಾಜಿ ನಾಯಕ ಧೋನಿ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿದ್ದರು. 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡುವ ಗುರಿ ಹೊಂದಿದ್ದು, ಇದು ಅವರ ಪಾಲಿಗೆ ನಾಲ್ಕನೆ ವಿಶ್ವಕಪ್ ಆಗಿದೆ.