ಧೋನಿ-ಭುವಿಯ ಚೌತಿ ಉಡುಗೊರೆ

Update: 2017-08-24 18:49 GMT

ಪಲ್ಲೆಕೆಲೆ, ಆ.24: ಶ್ರೀಲಂಕಾ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗುರುವಾರ 3 ವಿಕೆಟ್‌ಗಳ ರೋಚಕ ಜಯ ಗಳಿಸಿದೆ.

 ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಗೆಲುವಿಗೆ 47 ಓವರ್‌ಗಳಳ್ಲಿ 231 ರನ್ ಮಾಡಬೇಕಿದ್ದ ಟೀಮ್ ಇಂಡಿಯಾ 44.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸುವ ಮೂಲಕ ಗೆಲುವಿನ ದಡ ಸೇರಿತು.

 21.5 ಓವರ್‌ಗಳಲ್ಲಿ 131ಕ್ಕೆ 7 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಧೋನಿ ಮತ್ತು ಭುವನೇಶ್ವರ ಕುಮಾರ್ 8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 100 ರನ್ ಸೇರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭುವನೇಶ್ವರ ಕುಮಾರ್ ಔಟಾಗದೆ 53 ರನ್(80ಎ, 4ಬೌ,1ಸಿ) ಮತ್ತು ಧೋನಿ ಔಟಾಗದೆ 45 ರನ್(68ಎ, 1ಬೌ) ಗಳಿಸಿದರು.

 231 ರನ್‌ಗಳ ಸವಾಲನ್ನು ಪಡೆದ ಭಾರತದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿದ್ದರೂ ಬಳಿಕ ಸ್ಪಿನ್ನರ್ ಅಖಿಲಾ ಧನಂಜಯ ದಾಳಿಗೆ ತತ್ತರಿಸಿತು. ಗೆಲುವಿಗೆ 237 ರನ್‌ಗಳ ಸವಾಲು ಪಡೆದಿದ್ದ ಭಾರತದ ಬ್ಯಾಟಿಂಗ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಮಳೆಯಿಂದಾಗಿ 15 ನಿಮಿಷ ತಡವಾಗಿ ಭಾರತದ ಬ್ಯಾಟಿಂಗ್ ಆರಂಭಗೊಂಡಿತು. ಈ ಕಾರಣದಿಂದಾಗಿ ಭಾರತದ ಗೆಲುವಿಗೆ 231 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಗಿತ್ತು.

    ಇನಿಂಗ್ಸ್ ಆರಂಭಿಸಿದ ಭಾರತದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 15.3 ಓವರ್‌ಗಳಲ್ಲಿ 109 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ಶರ್ಮ 160ನೆ ಏಕದಿನ ಪಂದ್ಯದಲ್ಲಿ 12ನೆ ಅರ್ಧಶತಕ ದಾಖಲಿಸಿದರು. ಅವರು 54 ರನ್ (45ಎ,5ಬೌ,3ಸಿ) ಗಳಿಸಿ ಅಖಿಲಾ ಧನಂಜಯ ಎಸೆತದಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು.

 ಲೋಕೇಶ್ ರಾಹುಲ್ (4), ಕೇದಾರ್ ಜಾಧವ್(1), ವಿರಾಟ್ ಕೊಹ್ಲಿ (4), ಹಾರ್ದಿಕ್ ಪಾಂಡ್ಯ(0), ಅಕ್ಷರ್ ಪಟೇಲ್(6) ಔಟಾಗುವುದರೊಂದಿಗೆ ಭಾರತ 131 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು.

 ಅಪೂರ್ವ ಫಾರ್ಮ್‌ನಲ್ಲಿರುವ ಶಿಖರ್ ಧವನ್‌ಗೆ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಅವರು 49 ರನ್ (50ಎ, 6ಬೌ,1ಸಿ) ಗಳಿಸಿ ಸಿರಿವರ್ಧನ ಎಸೆತದಲ್ಲಿ ಮ್ಯಾಥ್ಯೂಸ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಧವನ್‌ಗೆ 88ನೆ ಪಂದ್ಯದಲ್ಲಿ 22ನೆ ಅರ್ಧಶತಕ ತಪ್ಪಿತು.

<ಶ್ರೀಲಂಕಾ 236/8: ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದ್ದರು.

ಭಾರತದ ಜಸ್‌ಪ್ರೀತ್ ಬುಮ್ರಾ 43ಕ್ಕೆ 4 ವಿಕೆಟ್ ಉಡಾಯಿಸಿ ಲಂಕಾದ ಬ್ಯಾಟಿಂಗ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 236 ರನ್ ಗಳಿಸಿತ್ತು

ಶೀಲಂಕಾದ ಮಿಲಿಂದಾ ಸಿರಿವರ್ಧನ ಮತ್ತು ಚಾಮರಾ ಕಪುಗಡೆರಾ 6ನೆ ವಿಕೆಟ್‌ಗೆ ದಾಖಲಿಸಿದ 91 ರನ್‌ಗಳ ಜೊತೆಯಾಟದ ನೆರವಿನಲ್ಲಿ ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಿಸಲು ಸಾಧ್ಯವಾಯಿತು.

   28.3 ಓವರ್‌ಗಳಲ್ಲಿ 121 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡವನ್ನು ಮುನ್ನಡೆಸಿದ ಸಿರಿವರ್ಧನ ಮತ್ತು ಕಪುಗೆಡೆರಾ ಭಾರತದ ಬೌಲರ್‌ಗಳನ್ನು ಸ್ವಲ್ಪ ಹೊತ್ತು ಚೆನ್ನಾಗಿ ದಂಡಿಸಿದರು. ಸಿರಿವರ್ಧನ 49ಎಸೆತಗಳಲ್ಲಿ 2ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಸಿರಿವಧರ್ನ ಅರ್ಧಶತಕ ಗಳಿಸಿದರು. ಬಳಿಕ ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಬುಮ್ರಾ ಅವಕಾಶ ನೀಡಲಿಲ್ಲ.

      ಕಪುಗೆಡೆರಾ ಅವರಿಗೆ ಬುಮ್ರಾ ಅರ್ಧಶತಕ ದಾಖಲಿಸಲು ಬಿಡಲಿಲ್ಲ. ಶ್ರೀಲಂಕಾ ತಂಡದ ಆರಂಭ ಚೆನ್ನಾಗಿತ್ತು.4 ಓವರ್‌ಗಳ ಮುಕ್ತಾಯಕ್ಕೆ 25 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಡಿಕ್ವೆಲ್ಲಾ 31ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಧವನ್‌ಗೆ ಕ್ಯಾಚ್ ನೀಡುವುದರೊಂದಿಗೆ ಲಂಕಾದ ಮೊದಲ ವಿಕೆಟ್ ಪತನಗೊಂಡಿತ್ತು. ಬಳಿಕ ಗುಣತಿಲಕ ನಿರ್ಗಮಿಸಿದರು. ನಾಯಕ ಉಪುಲ್ ತರಂಗ 2 ಬೌಂಡರಿ ಬಾರಿಸಿ ಅಬ್ಬರಿಸಿದರೂ ಅವರ ಬ್ಯಾಟಿಂಗ್ 9ರಲ್ಲಿ ಕೊನೆಗೊಂಡಿತು.ಹೀಗಾಗಿ ಶ್ರೀಲಂಕಾ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು.

ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 20 ರನ್ ಗಳಿಸಲು 41 ಎಸೆತಗಳನ್ನು ಎದುರಿಸಿದರು. 28.3 ಓವರ್‌ಗಳಲ್ಲಿ 121 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡದ ಸ್ಕೋರ್‌ನ್ನು ಸಿರಿವರ್ಧನ ಮತ್ತು ಕಪುಗೆಡೆರಾ ಅವರು ಜೊತೆಯಾಗಿ ಏರಿಸಿದರು. ಸಿರಿವರ್ಧನ 58 ರನ್(58ಎ, 2ಬೌ,1ಸಿ) ಮತ್ತು ಚಾಮರಾ ಕಪುಗೆಡೆರಾ 40 (61ಎ, 2ಬೌ) ರನ್ ಗಳಿಸಿ ಲಂಕಾದ ಸ್ಕೋರ್ 200ರ ಗಟಿ ದಾಟಿಸಲು ನೆರವಾದರು.

 ಗುಣತಿಲಕ (19), ಕುಶಾಲ್ ಮೆಂಡಿಸ್(19) ಎರಡಂಕೆಯ ಸ್ಕೋರ್ ಜಮೆ ಮಾಡಿದರು.

ಭಾರತದ ಜಸ್‌ಪ್ರೀತ್ ಬುಮ್ರಾ 43ಕ್ಕೆ 4, ಚಾಹಲ್ 43ಕ್ಕೆ 2, ಹಾರ್ದಿಕ್ ಪಾಂಡ್ಯ 24ಕ್ಕೆ 1 ಮತ್ತು ಅಕ್ಷರ್ ಪಟೇಲ್ 30ಕ್ಕೆ 1 ವಿಕೆಟ್ ಪಡೆದರು.

►ಶ್ರೀಲಂಕಾ: 50 ಓವರ್‌ಗಳಲ್ಲಿ 236/8

ನಿರೊಶನ್ ಡಿಕ್ವೆಲ್ಲಾ ಸಿ ಧವನ್ ಬಿ ಬುಮ್ರಾ 31                                        

ಗುಣತಿಲಕ ಸ್ಟಂ.ಧೋನಿ ಬಿ ಚಾಹಲ್ 19                                        

ಕುಶಾಲ್ ಮೆಂಡಿಸ್ ಎಲ್ಬಿಡಬ್ಲು ಸಿ ಚಾಹಲ್ 19                               

ತರಂಗ ಸಿ ಕೊಹ್ಲಿ ಬಿ ಪಾಂಡ್ಯ 09                                        

ಮ್ಯಾಥ್ಯೂಸ್ ಎಲ್ಬಿಡಬ್ಲು ಪಟೇಲ್ 20                                        

ಸಿರಿವರ್ದನ ಸಿ ಶರ್ಮ ಬಿ ಬುಮ್ರಾ 58                                        

ಕಪುಗಡೆರ ಬಿ ಬುಮ್ರಾ 40                                        

ಧನಂಜಯ ಸಿ ಪಟೇಲ್ ಬಿ ಬುಮ್ರಾ 09                                       

ಚಾಮೀರ ಅಜೇಯ 06                                       

ಫೆರ್ನಾಂಡೊ ಅಜೇಯ 03                                        

ಇತರ 22                                        

►ವಿಕೆಟ್ ಪತನ: 1-41, 2-70, 3-81, 4-99, 5-121, 6-212, 7-221, 8-230.

ಬೌಲಿಂಗ್ ವಿವರ:

ಭುವನೇಶ್ವರ ಕುಮಾರ 10-0-53-0                               

ಬುಮ್ರಾ 10-2-43-4                             

ಚಾಹಲ್ 10-1-43-2                               

 ಹಾರ್ದಿಕ್ ಪಾಂಡ್ಯ 5.2-0-24-1                              

ಅಕ್ಷರ್ ಪಟೇಲ್ 10-0-30-1                               

ಕೇದಾರ್ ಜಾಧವ್ 4.4-0-32-0                               

►ಭಾರತ: 44.2 ಓವರ್‌ಗಳಲ್ಲಿ 231/7

ರೋಹಿತ್ ಶರ್ಮ ಎಲ್ಬಿಡಬ್ಲು ಧನಂಜಯ 54                             

ಶಿಖರ್ ಧವನ್ ಸಿ ಮ್ಯಾಥ್ಯೂಸ್ ಬಿ ಸಿರಿವರ್ದನ 49                               

ರಾಹುಲ್ ಬಿ ಧನಂಜಯ 04                                       

ಕೇದಾರ್ ಜಾಧವ್ ಬಿ ಧನಂಜಯ 01                                        

ವಿರಾಟ್ ಕೊಹ್ಲಿ ಬಿ ಧಜಂಜಯ 04                                        

ಎಂಎಸ್ ಧೋನಿ ಅಜೇಯ 45                                        

ಹಾರ್ದಿಕ್ ಪಾಂಡ್ಯ ಸ್ಟಂ ಡಿಕ್ವೆಲ್ಲಾ ಬಿ ಧನಂಜಯ 00                               

ಅಕ್ಷರ್ ಪಟೇಲ್ ಎಲ್ಬಿಡಬ್ಲು ಧನಂಜಯ 06                                        

ಭುವನೇಶ್ವರ ಕುಮಾರ್ ಅಜೇಯ 53                                        

ಇತರ 15                                        

►ವಿಕೆಟ್ ಪತನ: 1-109, 2-113, 3-114, 4-118, 5-119, 6-121, 7-131.

ಬೌಲಿಂಗ್ ವಿವರ:

ಲಸಿತ ಮಾಲಿಂಗ 8-0-49-0                               

ವಿಶ್ವ ಫೆರ್ನಾಂಡೊ 6.2-0-32-0                               

ಮ್ಯಾಥ್ಯೂಸ್ 3-0-11-0                               

ಚಾಮೀರ 7-0-45-0                              

ಧನಂಜಯ 10-0-54-6                             

ಸಿರಿವರ್ಧನ 10-0-39-1.                               

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News