×
Ad

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಸೈನಾಗೆ ಕಂಚು

Update: 2017-08-26 20:16 IST

ಗ್ಲಾಸ್ಗೊ, ಆ.26: ವಿಶ್ವದ ನಂ.16ನೆ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಕಂಚಿಗೆ ತೃಪ್ತಿಪಟ್ಟಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ಅವರು ಜಪಾನ್‌ನ ಏಳನೆ ಶ್ರೇಯಾಂಕದ ಆಟಗಾರ್ತಿ ನೊರೊಮಿ ಒಕುಹರಾ ವಿರುದ್ಧ 21-12, 17-21, 10-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 74 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ಮೊದಲ ಗೇಮ್‌ನ್ನು 21-12 ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, ಎರಡು ಹಾಗೂ 3ನೆ ಗೇಮ್‌ನ್ನು ಗೆದ್ದುಕೊಂಡಿರುವ ಜಪಾನ್ ಆಟಗಾರ್ತಿ ಸೈನಾಗೆ ತಿರುಗೇಟು ನೀಡಿ ಫೈನಲ್‌ಗೆ ತಲುಪಿದ್ದಾರೆ.

   ಸೈನಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೆ ಬಾರಿ ಪದಕ ಜಯಿಸಿದರು. 2015ರ ಆವೃತ್ತಿಯಲ್ಲಿ ಸೈನಾಗೆ ಬೆಳ್ಳಿ ಪದಕ ಲಭಿಸಿತ್ತು. ಶುಕ್ರವಾರ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗಿಲ್ಮೊರ್‌ರನ್ನು 21-19, 19-21, 21-15 ಅಂತರದಿಂದ ಮಣಿಸಿದ ಸೈನಾ ನೆಹ್ವಾಲ್ ಸೆಮಿ ಫೈನಲ್‌ಗೆ ತಲುಪುವ ಮೂಲಕ ಭಾರತದ ಸಂತಸವನ್ನು ಇಮ್ಮಡಿಗೊಳಿಸಿದ್ದರು. ಪ್ರಮುಖ ಟೂರ್ನಿಯಲ್ಲಿ ಮತ್ತೊಮ್ಮೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿರುವ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಕಂಚಿನ ಪದಕವನ್ನು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News