ಮೂರನೆ ಏಕದಿನ: ಭಾರತದ ಗೆಲುವಿಗೆ 218 ರನ್‌ಗಳ ಗುರಿ
ಪಲ್ಲೆಕೆಲೆ, ಆ.27: ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂದು ಭಾರತ ಗೆಲುವಿಗೆ 218 ರನ್‌ಗಳ ಸವಾಲನ್ನು ಪಡೆದಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ಚಾಮರಾ ಕಪುಗೆಡೆರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಭಾರತದ ಜಸ್‌ಪ್ರೀತ್ ಬುಮ್ರಾ(27ಕ್ಕೆ 5) ದಾಳಿಗೆ ಸಿಲುಕಿದ್ದರೂ ಲಹಿರು ತಿರಿಮನ್ನೆ ಉಪಯುಕ್ತ ಬ್ಯಾಟಿಂಗ್ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲ್ಲಿ 9 ವಿಕೆಟ್ ನಷ್ಟದಲ್ಲಿ 217 ರನ್ ದಾಖಲಿಸಿತು..
ತಿರಿಮನ್ನೆ 80 ರನ್(5ಬೌ, 1ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ದಿನೇಶ್ ಚಾಂಡಿಮಾಲ್ (36), ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ(13), ಆ್ಯಂಜೆಲೊ ಮ್ಯಾಥ್ಯೂಸ್(11), ನಾಯಕ ಚಾಮರಾ ಕಪುಗೆಡೆರಾ(14), ಮಿಲಿಂದಾ ಸಿರಿವರ್ಧನ(29) ಎರಡಂಕಿಯ ಸ್ಕೋರ್ ದಾಖಲಿಸಿದರು.
ಭಾರತದ ಪರ ಬುಮ್ರಾ 27ಕ್ಕೆ 5 ವಿಕೆಟ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದರು.