×
Ad

ಭಾರತದ ಗೆಲುವು ಸಹಿಸದ ಪ್ರೇಕ್ಷಕರು: 3ನೆ ಏಕದಿನ ಪಂದ್ಯಕ್ಕೆ ಅಡ್ಡಿ

Update: 2017-08-27 22:32 IST

ಪಲ್ಲೆಕೆಲೆ, ಆ.27: ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ರೋಹಿತ್ ಶರ್ಮ ಅವರ ಶತಕದ ನೆರವಿನಲ್ಲಿ ಭಾರತದ ಗೆಲುವು ದಾಖಲಿಸುವ ಹಂತದಲ್ಲಿದ್ದಾಗ ಪ್ರೇಕ್ಷಕರು ಬಾಟ್ಲಿಗಳನ್ನು ಎಸೆದು ಅಡ್ಡ್ಡಿಪಡಿಸಿದ ಘಟನೆ ನಡೆದಿದೆ.

  ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೆ ಪಂದ್ಯದಲ್ಲಿ ಗೆಲುವಿಗೆ 218 ರನ್‌ಗಳ ಸವಾಲನ್ನು ಪಡೆದ ಭಾರತ 44 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 210 ರನ್ ಗಳಿಸಿದ್ದಾಗ ಶ್ರೀಲಂಕಾದ ಪ್ರೇಕ್ಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಟ ಸ್ಥಗಿತಗೊಂಡಿದೆ.

ಗೆಲುವಿಗೆ 36 ಎಸೆತಗಳಲ್ಲಿ 8 ರನ್‌ಗಳ ಆವಶ್ಯಕತೆ ಇದ್ದಾಗ ಪ್ರೇಕ್ಷಕರು ಮೈದಾನಕ್ಕೆ ಬಾಟ್ಲಿಗಳನ್ನು ಎಸೆದ ಪರಿಣಾಮವಾಗಿ ಆಟ ಸ್ಥಗಿತಗೊಂಡಿದೆ.

   ರೋಹಿತ್ ಶರ್ಮ ಔಟಾಗದೆ 122 ರನ್(143ಎ, 16ಬೌ,2ಸಿ) ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 61 ರನ್(81ಎ, 4ಬೌ,1ಸಿ) ಗಳಿಸಿದರು. ಅಕಿಲಾ ಧನಂಜಯ್ ದಾಳಿಗೆ ಸಿಲುಕಿ ಭಾರತ ಅಗ್ರ ಸರದಿಯ ದಾಂಡಿಗರನ್ನು ಬೇಗನೆ ಕಳೆದುಕೊಂಡಿತ್ತು. ಶಿಖರ್ ಧವನ್(5), ವಿರಾಟ್ ಕೊಹ್ಲಿ(3), ರಾಹುಲ್(17) ಮತ್ತು ಜಾಧವ್(0) ಬೇಗನೆ ಔಟಾಗಿದ್ದರು. ಬಳಿಕ ರೋಹಿತ್ ಶರ್ಮ ಮತ್ತು ಧೋನಿ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದರು.

ಶ್ರೀಲಂಕಾ 217/9:ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ಚಾಮರಾ ಕಪುಗೆಡೆರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News