ಶ್ರೀಲಂಕಾ ವಿರುದ್ಧ ಮೂರನೆ ಏಕದಿನ ಪಂದ್ಯ: ಭಾರತಕ್ಕೆ ಭರ್ಜರಿ ಜಯ

Update: 2017-08-27 18:02 GMT

ಪಲ್ಲೆಕೆಲೆ, ಆ.27: ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಇಂದು 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

 ಈ ಗೆಲುವಿನೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಆಡಲು ಬಾಕಿ ಇರುವಾಗಲೇ ಭಾರತ 3-0 ಅಂತರದಲ್ಲಿ ಸರಣಿ ಜಯಿಸಿದೆ.

     ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೆ ಪಂದ್ಯದಲ್ಲಿ ರೋಹಿತ್ ಶರ್ಮ ಔಟಾಗದೆ 124 ರನ್(145ಎ, 16ಎ, ಸಿ) ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 67 ರನ್( 86ಎ,4ಬೌ,1ಸಿ) ನೆರವಿನಲ್ಲಿ ಇನ್ನೂ 29 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 218 ರನ್ ಗಳಿಸಿತು.

 ಆಟಕ್ಕೆ ಪ್ರೇಕ್ಷಕರ ಅಡ್ಡಿ: ಗೆಲುವಿಗೆ 218 ರನ್‌ಗಳ ಸವಾಲನ್ನು ಪಡೆದ ಭಾರತ 44 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 210 ರನ್ ಗಳಿಸಿದ್ದಾಗ ಶ್ರೀಲಂಕಾದ ಪ್ರೇಕ್ಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಟ ಸ್ವಲ್ಪ ಹೊತ್ತು ಸ್ಥಗಿತಗೊಂಡಿತ್ತು.

 ಗೆಲುವಿಗೆ 36 ಎಸೆತಗಳಲ್ಲಿ 8 ರನ್‌ಗಳ ಆವಶ್ಯಕತೆ ಇದ್ದಾಗ ಪ್ರೇಕ್ಷಕರು ಮೈದಾನಕ್ಕೆ ಬಾಟ್ಲಿಗಳನ್ನು ಎಸೆದ ಪರಿಣಾಮವಾಗಿ ಆಟ ಸ್ಥಗಿತಗೊಂಡಿತ್ತು. ಬಳಿಕ ಆಟ ಆರಂಭಗೊಂಡಾಗ ರೋಹಿತ್ ಶರ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಗೆಲುವಿಗೆ ಅಗತ್ಯದ ರನ್ ಸೇರಿಸಿದರು.

    ಅಕಿಲಾ ಧನಂಜಯ ದಾಳಿಗೆ ಸಿಲುಕಿ ಭಾರತ ಅಗ್ರ ಸರದಿಯ ದಾಂಡಿಗರನ್ನು ಬೇಗನೆ ಕಳೆದುಕೊಂಡಿತ್ತು. ಶಿಖರ್ ಧವನ್(5), ವಿರಾಟ್ ಕೊಹ್ಲಿ(3), ರಾಹುಲ್(17) ಮತ್ತು ಜಾಧವ್(0) ಬೇಗನೆ ಔಟಾಗಿದ್ದರು. ಬಳಿಕ ರೋಹಿತ್ ಶರ್ಮ ಮತ್ತು ಧೋನಿ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಇವರು ಐದನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 157 ರನ್ ಸೇರಿಸಿದರು. ರೋಹಿತ್ ಶರ್ಮ 160ನೆ ಏಕದಿನ ಪಂದ್ಯದಲ್ಲಿ 11ನೆ ಶತಕ ಮತ್ತು ಧೋನಿ 298ನೆ ಏಕದಿನ ಪಂದ್ಯದಲ್ಲಿ 64ನೆ ಅರ್ಧಶತಕ ದಾಖಲಿಸಿದ್ದಾರೆ.

ಶ್ರೀಲಂಕಾ 217/9:ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ಚಾಮರಾ ಕಪುಗೆಡೆರಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News