×
Ad

ಲೀ ಕನಸು ಭಗ್ನಗೊಳಿಸಿದ ಆ್ಯಕ್ಸೆಲ್ಸನ್

Update: 2017-08-28 23:44 IST

ಗ್ಲಾಸ್ಗೋ, ಆ.28: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಆರನೆ ಬಾರಿ ಪ್ರಶಸ್ತಿ ಗೆಲ್ಲಬೇಕೆಂಬ ಲಿನ್ ಡಾನ್ ಕನಸನ್ನು ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್ಸನ್ ಭಗ್ನಗೊಳಿಸಿದ್ದಾರೆ. ಇಲ್ಲಿ ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆ್ಯಕ್ಸೆಲ್ಸನ್ ಚೀನಾದ 33ರ ಹರೆಯದ ಲೆಜೆಂಡ್ ಆಟಗಾರ ಲಿನ್ ಡಾನ್‌ರನ್ನು 22-20, 21-16 ಗೇಮ್‌ಗಳ ಅಂತರದಿಂದ ಮಣಿಸಿ ಶಾಕ್ ನೀಡಿದರು. ಆ್ಯಕ್ಸೆಲ್ಸನ್ ಗ್ಲಾಸ್ಗೋದಲ್ಲಿ 20 ವರ್ಷಗಳ ಬಳಿಕ ಪ್ರಶಸ್ತಿ ಜಯಿಸಿದ ಮೊದಲ ಡೆನ್ಮಾರ್ಕ್ ಆಟಗಾರ ಎನಿಸಿಕೊಂಡರು. 1997ರಲ್ಲಿ ಪೀಟರ್ ರಾಸ್‌ಮುಸ್ಸೆನ್ ಈ ಸಾಧನೆ ಮಾಡಿದ್ದರು. 40 ವರ್ಷಗಳ ಹಿಂದೆ ನಡೆದಿದ್ದ ಮೊದಲ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಡೆನ್ಮಾರ್ಕ್‌ನ ಫ್ಲೆಮಿಂಗ್ ಡೆಲ್ಫ್ಸ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News