ಸುದ್ದಿಗಾರನ ಪ್ರಶ್ನೆಗೆ ಜಪಾನ್ ಆಟಗಾರ್ತಿ ಸುಸ್ತು

Update: 2017-09-03 11:31 GMT

ನ್ಯೂಯಾರ್ಕ್, ಸೆ.3: ಜಪಾನ್‌ನ ಪ್ರತಿಭಾವಂತ ಯುವ ಆಟಗಾರ್ತಿ ನಯೊಮಿ ಒಸಾಕಾ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸೋತಿದ್ದರು. ಆದರೆ, ಅವರಿಗೆ ಪಂದ್ಯದಲ್ಲಿ ಸೋತಿದ್ದಕ್ಕಿಂತಲೂ ವರದಿಗಾರನೊಬ್ಬ ಕೇಳಿದ ಮೂರ್ಖತನದ ಪ್ರಶ್ನೆಯಿಂದ ಸುಸ್ತಾಗಿ ಹೋದರು.
ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ವರದಿಗಾರನೊಬ್ಬ ‘ನೀವು ಏಕೆ ಇಂದು ಪಂದ್ಯ ಗೆದ್ದಿದ್ದೀರಿ? ಎಂದು ಪ್ರಶ್ನಿಸಿದ್ದಾನೆ. ಇದರಿಂದ ಬೇಸ್ತುಬಿದ್ದ ಜಪಾನ್ ಆಟಗಾರ್ತಿ, ‘‘ನಾನು ಇಂದಿನ ಪಂದ್ಯವನ್ನು ಗೆದ್ದಿಲ್ಲ. ನಿಮ್ಮ ಪ್ರಶ್ನೆ ತಪ್ಪು’’ ಎಂದು ಉತ್ತರಿಸಿದರು.
ವರದಿಗಾರನೊಬ್ಬ ಪಂದ್ಯದ ಫಲಿತಾಂಶದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಪಂದ್ಯ ಬಳಿಕದ ಸುದ್ದಿಗೋಷ್ಠಿಗೆ ತೆರಳಿದರೆ ಎಂತಹ ಮೂರ್ಖತನ ನಡೆಯುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.
ಜಪಾನ್‌ನ ಉದಯೋನ್ಮುಖ ಆಟಗಾರ್ತಿ ಒಸಾಕಾ ಮೊದಲ ಸುತ್ತಿನ ಪಂದ್ಯದಲ್ಲಿ ಹಾಲಿ ಯುಎಸ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್‌ರನ್ನು ಮಣಿಸಿ ಕೂಟದಿಂದ ನಿರ್ಗಮಿಸುವಂತೆ ಮಾಡಿದ್ದರು. ಬಹುಶಃ ವರದಿಗಾರ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಇಂತಹ ಮೂರ್ಖತನದ ಪ್ರಶ್ನೆ ಕೇಳಿಬರಬಹುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News