×
Ad

5ನೆ ಏಕದಿನ ಪಂದ್ಯ: ಭಾರತದ ಗೆಲುವಿಗೆ 239 ರನ್‌ಗಳ ಗುರಿ

Update: 2017-09-03 19:09 IST

ಕೊಲಂಬೊ,ಸೆ.3: ಶ್ರೀಲಂಕಾ ವಿರುದ್ಧದ ಐದನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಗೆಲುವಿಗೆ 239 ರನ್‌ಗಳ ಸವಾಲು ಪಡೆದಿದೆ. ಇಲ್ಲಿನ ಆರ್.ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವೇಗಿ ಭುವನೇಶ್ವರ ಕುಮಾರ್ (42ಕ್ಕೆ 5) ದಾಳಿಗೆ ಸಿಲುಕಿ 49.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟಾಗಿದೆ.

  ಶ್ರೀಲಂಕಾದ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ (55) ಮತ್ತು ಲಹಿರು ತಿರಿಮನ್ನೆ (67) ಅರ್ಧಶತಕ ದಾಖಲಿಸಿದರು. ಆದರೆ ನಾಯಕ ಉಪುಲ್ ತರಂಗ(48) ಅರ್ಧಶತಕ ವಂಚಿತಗೊಂಡರು. ಸಿರಿವರ್ಧನ 18 ರನ್ ಗಳಿಸಿದರು.

 ಟಾಸ್ ಜಯಿಸಿದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತ್ತು. 9.2 ಓವರ್‌ಗಳಲ್ಲಿ 63ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಮ್ಯಾಥ್ಯೂಸ್ ಮತ್ತು ತಿರಿಮನ್ನೆ ಜೊತೆಯಾಗಿ ನಾಲ್ಕನೆ ವಿಕೆಟ್‌ಗೆ 122 ರನ್‌ಗಳ ಜೊತೆಯಾಟ ನೀಡಿದರು. ಇದರಿಂದಾಗಿ ಲಂಕಾ ತಂಡಕ್ಕೆ ಸ್ಪರ್ಧಾತ್ಮ ಮೊತ್ತ ದಾಖಲಿಸಲು ಸಾಧ್ಯವಾಯಿತು.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 45ನೆ ಓವರ್‌ನಲ್ಲಿ ಚಾಹಲ್ ಎಸೆತದಲ್ಲಿ ಅಖಿಲಾ ಧನಂಜಯ ಅವರನ್ನು ಸ್ಟಂಪ್ ಮಾಡುವ ಮೂಲಕ ಸ್ಟಂಪಿಂಗ್‌ನಲ್ಲಿ ಶತಕ ಪೂರ್ಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News