ತಂದೆಯಾದ ಜೊಕೊವಿಕ್

Update: 2017-09-03 18:22 GMT

ಬೆಲ್‌ಗ್ರೆಡ್, ಸೆ.3: ಸೆರೆನಾ ವಿಲಿಯಮ್ಸ್ ಹೆಣ್ಣು ಮಗುವಿಗೆ ತಾಯಿಯಾದ ಕೆಲವೇ ಗಂಟೆಗಳ ಬಳಿಕ ವಿಶ್ವದ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಕೂಡ ಹೆಣ್ಣು ಮಗುವಿನ ತಂದೆಯಾದರು. ಜೊಕೊವಿಕ್‌ರ ಪತ್ನಿ ಜೆಲೆನಾ ಎರಡನೆ ಮಗುವಿಗೆ ಜನ್ಮ ನೀಡಿದ್ದಾರೆ. ಶನಿವಾರ ಸಂಜೆ ಜನಿಸಿರುವ ಹೆಣ್ಣು ಮಗುವಿಗೆ ತಾರಾ ಎಂದು ಹೆಸರಿಡಲಾಗಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಜೊಕೊವಿಕ್-ಜೆಲೆನಾ ದಂಪತಿಗೆ ಈಗಾಗಲೇ 2 ವರ್ಷದ ಸ್ಟೀಫನ್ ಹೆಸರಿನ ಗಂಡು ಮಗುವಿದೆ.

ಮಣಿಗಂಟು ನೋವಿನಿಂದಾಗಿ ಜೊಕೊವಿಕ್ ಪ್ರಸ್ತುತ ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದಾರೆ. ವಿಂಬಲ್ಡನ್‌ನಲ್ಲಿ ಥಾಮಸ್ ಬೆರ್ಡಿಕ್ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದ ಜೊಕೊವಿಕ್ ಜುಲೈನಲ್ಲಿ ಟೆನಿಸ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News