ಶ್ರೀಲಂಕಾ ವಿರುದ್ಧ ಮೊದಲ ಟ್ವೆಂಟಿ-20: ಭಾರತಕ್ಕೆ 171 ರನ್ ಗುರಿ

Update: 2017-09-06 16:05 GMT

ಕೊಲಂಬೊ, ಸೆ.6: ದಿಲ್ಶನ್ ಮುನವೀರ(53) ಹಾಗೂ ಅಶನ್ ಪ್ರಿಯಾಂಜನ್(ಅಜೇಯ 40) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿದೆ.
ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಶ್ರೀಲಂಕಾದ ಇನಿಂಗ್ಸ್ ಆರಂಭಿಸಿದ ಡಿಕ್ವೆಲ್ಲಾ(17) ಹಾಗೂ ನಾಯಕ ಉಪುಲ್ ತರಂಗ(5)ಉತ್ತಮ ಆರಂಭ ನೀಡಲು ವಿಫಲರಾದರು. ಲಂಕಾ 18 ನೆ ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಬುಮ್ರಾ ಹಾಗೂ ಭುವನೇಶ್ವರ ಎಸೆದ 19 ಹಾಗೂ 20ನೆ ಓವರ್‌ನಲ್ಲಿ 26 ರನ್ ಕಲೆ ಹಾಕಿದ ಪ್ರಿಯಾಂಜನ್ ಹಾಗೂ ಇಸುರು ಉದಾನ (ಅಜೇಯ 19)ಭಾರತದ ಗೆಲುವಿಗೆ 171 ರನ್ ಗುರಿ ನೀಡಲು ನೆರವಾದರು.
 ಭಾರತದ ಪರ ಸ್ಪಿನ್ನರ್‌ಗಳಾದ ಯುಝ್ವೆಂದ್ರ ಚಾಹಲ್(3-43), ಕುಲ್‌ದೀಪ್ ಯಾದವ್(2-20) ಐದು ವಿಕೆಟ್ ಹಂಚಿಕೊಂಡರು. ವೇಗಿಗಳಾದ ಭುವನೇಶ್ವರ ಕುಮಾರ್(1-36) ಹಾಗೂ ಬುಮ್ರಾ(1-38) ತಲಾ ಒಂದು ವಿಕೆಟ್ ಪಡೆದರು. ಈ ಇಬ್ಬರು ಬೌಲರ್ 19 ಹಾಗೂ 20 ಓವರ್‌ನಲ್ಲಿ ತಲಾ 13 ರನ್ ನೀಡಿ ದುಬಾರಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News