ಆಸ್ಟ್ರೇಲಿಯಕ್ಕೆ 72 ರನ್‌ಗಳ ಮುನ್ನಡೆ

Update: 2017-09-06 18:15 GMT

ಚಿತ್ತಗಾಂಗ್, ಸೆ.6: ಇಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ72 ರನ್‌ಗಳ ಮುನ್ನಡೆ ಸಾಧಿಸಿದೆ.

ಟೆಸ್ಟ್‌ನ ಮೂರನೆ ದಿನವಾಗಿರುವ ಬುಧವಾರ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 118 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 377 ರನ್ ಗಳಿಸಿದೆ.

 ಆಟ ನಿಂತಾಗ 8 ರನ್ ಗಳಿಸಿರುವ ಸ್ಟೀವ್ ಓ ಕೀಫೆ ಮತ್ತು ಇನ್ನೂ ಖಾತೆ ತೆರೆಯದೆ ನಥಾನ್ ಲಿಯೊನ್ ಕ್ರೀಸ್‌ನಲ್ಲಿದ್ದರು.

ಎರಡನೆ ದಿನದಾಟದಂತ್ಯಕ್ಕೆ 64 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 225 ರನ್ ಗಳಿಸಿದ್ದ ಆಸ್ಟ್ರೇಲಿಯ ಬುಧವಾರ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 152 ರನ್ ಸೇರಿಸಿದೆ.

88 ರನ್ ಗಳಿಸಿ ಔಟಾಗದೆ ಉಳಿದಿದ್ದ ಆರಂಭಿಕ ದಾಂಡಿಗಡೇವಿಡ್ ವಾರ್ನರ್ 66ನೆ ಟೆಸ್ಟ್‌ನಲ್ಲಿ 20ನೆ ಶತಕ ದಾಖಲಿಸಿದರು. ಮಂಗಳವಾರ ಆಟ ನಿಂತಾಗ 66 ರನ್ ಗಳಿಸಿ ವಾರ್ನರ್ ಜೊತೆ ಕ್ರೀಸ್‌ನಲ್ಲಿದ್ದ ಪೀಟರ್ ಹ್ಯಾಂಡ್ಸ್‌ಕಂಬ್ ತನ್ನ ವೈಯಕ್ತಿಕ ಸ್ಕೋರ್‌ನ್ನು 82ಕ್ಕೆ ಏರಿಸಿ ರನೌಟಾದರು.

ವಾರ್ನರ್ ಮತ್ತು ಹ್ಯಾಂಡ್ಸ್ ಕಂಬ್ ಮೂರನೆ ವಿಕೆಟ್‌ಗೆ 152 ರನ್ ಸೇರಿಸಿದರು. ವಾರ್ನರ್ 123 ರನ್(234ಎ, 7ಬೌ) ಗಳಿಸಿ ಔಟಾದರು. ಹಿಲ್ಟನ್ ಕಾರ್ಟ್‌ರೈಟ್ 18 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 38 ರನ್, ವಿಕೆಟ್ ಕೀಪರ್ ಮ್ಯಾಥ್ಯೂವೇಡ್ 8 ರನ್, ಅಶ್ಟನ್ ಅಗರ್ 22 ರನ್, ಪ್ಯಾಟ್ ಕಮಿನ್ಸ್ 4 ರನ್ ಗಳಿಸಿ ಔಟಾದರು. ಬಾಂಗ್ಲಾದ ಮೆಹಿದಿ ಹಸನ್ 93ಕ್ಕೆ 3, ಮುಸ್ತ್ತಫಿ ಝುರ್ರಹ್ಮಾನ್ 84ಕ್ಕೆ 3, ಶಾಕಿಬ್ ಅಲ್ ಹಸನ್, ತೈಜುಲ್ ಹಸನ್ ತಲಾ 1 ವಿಕೆಟ್ ಪಡೆದರು.

                                             ಸಂಕ್ಷಿಪ್ತ ಸ್ಕೋರ್

►ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್ 305

►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 118 ಓವರ್‌ಗಳಲ್ಲಿ 377/9 (ವಾರ್ನರ್ 123, ಹ್ಯಾಂಡ್ಸ್ ಕಂಬ್ 82, ಸ್ಮಿತ್ 58; ಮೆಹಿದಿ ಹಸನ್ 93ಕ್ಕೆ 3, ಮುಸ್ತಫಿಝುರ್ರಹ್ಮಾನ್ 84ಕ್ಕೆ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News