ವಿಯೆಟ್ನಾಂ ಓಪನ್ : ಶ್ರೇಯಂಶಿ, ವೃಶಾಲಿಗೆ ಜಯ

Update: 2017-09-06 18:24 GMT

ವಿಯೆಟ್ನಾಂ, ಸೆ.6: ಭಾರತದ ಯುವ ಶಟ್ಲರ್‌ಗಳಾದ ಪರ್ದೇಶಿ ಶ್ರೇಯಂಶಿ ಹಾಗೂ ವೃಶಾಲಿ ಗುಮ್ಮಡಿ ವಿಯೆಟ್ನಾಂ ಓಪನ್ ಜಿಪಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಪರ್ದೇಶಿ ಸಹ ಆಟಗಾರ್ತಿ ವೈದೇಹಿ ಚೌಧರಿ ಅವರನ್ನು 24-22, 21-17 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ದಿನಾರ್ ಡಿಯ್ಹಾ ಅಯುಸ್ಟೈನ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ವೃಶಾಲಿ ಇಂಡೋನೇಷ್ಯಾದ ಜೆಸಿಕಾ ಮುಲ್ಜಾಟಿಯವರನ್ನು 21-9, 21-15 ಅಂತರದಿಂದ ಸೋಲಿಸಿದ್ದರು. ವೃಶಾಲಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೆನ್ ಸು ಯೂ ಅವರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ ಜೋಡಿ ಅರ್ಜುನ್ ಎಂ.ಆರ್. ಹಾಗೂ ರಾಮಚಂದ್ರನ್ ಶ್ಲೋಕ್ ಸಹ ಆಟಗಾರರಾದ ಅರುಣ್ ಜಾರ್ಜ್ ಹಾಗೂ ಸನ್ಯಾಂ ಶುಕ್ಲಾರನ್ನು 21-18, 19-21, 21-17 ಅಂತರದಿಂದ ಸೋಲಿಸಿ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.

ಭಾರತದ ಇನ್ನೋರ್ವ ಆಟಗಾರ ರಾಹುಲ್ ಯಾದವ್ ಚೈನೀಸ್ ತೈಪೆಯ ಸು ಜೆನ್ ಹವೊ ವಿರುದ್ಧ 21-10, 13-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News