×
Ad

ಫರ್ಹಾಗೆ ಸತತ 4ನೆ ಗ್ರೇಟ್‌ನಾರ್ತ್ ರನ್ ಟ್ರೋಫಿ

Update: 2017-09-10 23:56 IST

ಲಂಡನ್, ಸೆ.10: ಬ್ರಿಟನ್‌ನ ಮೊ ಫರ್ಹಾ ರವಿವಾರ ಸತತ ನಾಲ್ಕನೆ ಬಾರಿ 34ನೆ ಆವೃತ್ತಿಯ ಗ್ರೇಟ್ ನಾರ್ತ್ ರನ್ ಪ್ರಶಸ್ತಿ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದರು.

    ನಾಲ್ಕು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಫರ್ಹಾ 1 ಗಂಟೆ, 6 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಫರ್ಹಾಗೆ ತೀವ್ರ ಪೈಪೋಟಿ ನೀಡಿದ್ದ ನ್ಯೂಝಿಲೆಂಡ್‌ನ ಜಾಕ್ ರಾಬರ್ಟ್‌ಸನ್ ಎರಡನೆ ಸ್ಥಾನ ಪಡೆದರೆ, ಇಥಿಯೋಪಿಯದ ಫೆಯಿಸ ಲಿಲೆಸಾ ಮೂರನೆ ಸ್ಥಾನ ಪಡೆದರು. 34ರ ಹರೆಯದ ಫರ್ಹಾ ಸತತ ನಾಲ್ಕು ಬಾರಿ ಗ್ರೇಟ್‌ನಾರ್ತ್ ರನ್ ಪ್ರಶಸ್ತಿ ಜಯಿಸಿದ ಮೊದಲ ಅಥ್ಲೀಟ್ ಆಗಿದ್ದಾರೆ. 4 ಬಾರಿ ಗ್ರೇಟ್‌ನಾರ್ತ್ ರನ್ ಪ್ರಶಸ್ತಿ ಜಯಿಸಿರುವ ಕೀನ್ಯದ ಬೆನ್ಸನ್ ಮಸ್ಯ ಸಾಧನೆಯನ್ನು ಸರಿಗಟ್ಟಿದರು. ಬೆನ್ಸನ್ 1991, 1992, 1994 ಹಾಗೂ 1996ರಲ್ಲಿ ಪ್ರಶಸ್ತಿ ಜಯಿಸಿದ್ದರು.

ಫರ್ಹಾ ಕಳೆದ ತಿಂಗಳು ಝೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 5000 ಮೀ. ಓಟವನ್ನು ಜಯಿಸುವುದರೊಂದಿಗೆ ಟ್ರಾಕ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು. ಮ್ಯಾರಥಾನ್ ಓಟದಲ್ಲಿ ಸಕ್ರಿಯವಾಗಿರುವುದಾಗಿ ತಿಳಿಸಿದ್ದರು.

ಲಂಡನ್ ಮ್ಯಾರಥಾನ್ ವಿನ್ನರ್ ಕೀನ್ಯದ ಮೇರಿ ಕೀಟಾನಿ 1:05.59 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಮಹಿಳೆಯರ ಓಟದಲ್ಲಿ ಮೊದಲ ಸ್ಥಾನ ಪಡೆದರು.

ಸಿಮೊನ್ ಲಾಸನ್ ಪುರುಷರ ವೀಲ್‌ಚೇರ್ ಓಟದಲ್ಲಿ ಮೊದಲ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News