ಲಾಸ್ ಏಂಜಲೀಸ್‌ಗೆ ಒಲಿಂಪಿಕ್ಸ್ ಆತಿಥ್ಯದ ಹಕ್ಕು

Update: 2017-09-14 18:25 GMT

ಪ್ಯಾರಿಸ್, ಸೆ.14: ದಶಕಗಳ ಸಂಪ್ರದಾಯವನ್ನು ಮುರಿದಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ(ಎಲ್‌ಒಸಿ) ಒಂದೇ ಬಾರಿಗೆ ಎರಡು ದೇಶಗಳಿಗೆ ಒಲಿಂಪಿಕ್ಸ್ ಆತಿಥ್ಯದ ಹಕ್ಕನ್ನು ಹಂಚಿಕೆ ಮಾಡಿದೆ.

ಪ್ಯಾರಿಸ್‌ಗೆ 2024ರ ಬೇಸಿಗೆ ಒಲಿಂಪಿಕ್ಸ್ ಹಾಗೂ ಲಾಸ್ ಏಂಜಲೀಸ್‌ಗೆ 2028ರ ಆವೃತ್ತಿಯ ಒಲಿಂಪಿಕ್ಸ್ ಆತಿಥ್ಯದ ಹಕ್ಕನ್ನು ನೀಡಲಾ ಗಿದೆ.

 ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್‌ನ ನಗರಗಳು ಮಾತ್ರ ಒಲಿಂಪಿಕ್ಸ್ ಆತಿಥ್ಯಕ್ಕೆ ಮುಂಗಡವಾಗಿ ಬಿಡ್ ಸಲ್ಲಿಸಿದ್ದು, ಬೇರೆ ದೇಶಗಳು ಸ್ಪರ್ಧೆಯಲ್ಲಿರದ ಹಿನ್ನೆಲೆಯಲ್ಲಿ ಈ ಎರಡು ನಗರಕ್ಕೆ ಆತಿಥ್ಯದ ಹಕ್ಕು ನೀಡಲಾಗಿದೆ.

ಪ್ಯಾರಿಸ್ ಒಂದು ಶತಮಾನದ ಬಳಿಕ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿದೆ. 1924ರಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಲಾಸ್ ಏಂಜಲಿಸ್ 1932 ಹಾಗೂ 1984ರ ಬಳಿಕ ಮೂರನೆ ಬಾರಿ ಒಲಿಂಪಿಕ್ಸ್‌ನ ಆತಿಥ್ಯದ ಹಕ್ಕು ಪಡೆದಿದೆ.

 ‘‘ಮುಂದಿನ ಏಳು ವರ್ಷಗಳಲ್ಲಿ ನಾವು ಎಲ್ಲ ಹುಮ್ಮಸ್ಸಿನೊಂದಿಗೆ ಒಲಿಂಪಿಕ್ಸ್ ಗೇಮ್ಸ್‌ಗೆ ತಯಾರಿ ನಡೆಸಲಿದ್ದೇವೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ನಡೆಸಲು ಸಾಂಘಿಕ ಪ್ರಯತ್ನ ನಡೆಸುತ್ತೇವೆ’’ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಹೇಳಿದ್ದಾರೆ.

2024ರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಿದ್ದ 6 ನಗರಗಳ ಪೈಕಿ ನಾಲ್ಕು ನಗರಗಳಾದ ಬೊಸ್ಟನ್, ಬುಡಾಪೆಸ್ಟ್, ರೋಮ್ ಹಾಗೂ ಹ್ಯಾಂಬರ್ಗ್ ನಗರಗಳು ಬಿಡ್‌ನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ಐಒಸಿ ಒಂದೇ ಬಾರಿಗೆ ಎರಡು ಗೇಮ್ಸ್‌ನ ಆತಿಥ್ಯದ ಹಕ್ಕನ್ನು ಪ್ರದಾನಿಸಲು ನಿರ್ಧರಿಸಿತ್ತು.

ಎಲ್‌ಒಸಿ 11 ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಎರಡು ಒಲಿಂಪಿಕ್ಸ್ ಗೇಮ್ಸ್ ಆತಿಥ್ಯದ ಹಕ್ಕನ್ನು ನೀಡಿದೆ.

2024ರ ಒಲಿಂಪಿಕ್ಸ್‌ನ ಬಿಡ್‌ನ್ನು ಕೈಬಿಟ್ಟಿರುವ ಲಾಸ್ ಏಂಜಲಿಸ್ 2028ರ ಒಲಿಂಪಿಕ್ಸ್ ಆತಿಥ್ಯಕ್ಕೆ ಆಸಕ್ತಿ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ 2024ರ ಒಲಿಂಪಿಕ್ಸ್‌ಗೆ ಪ್ಯಾರಿಸ್ ಮಾತ್ರ ಸ್ಪರ್ಧೆಯಲ್ಲಿದ್ದ ಕಾರಣ ಅದಕ್ಕೆ ಆತಿಥ್ಯದ ಹಕ್ಕು ಲಭಿಸಿದೆ.

6.8 ಬಿಲಿಯನ್ ಯುರೋಸ್ ಗೇಮ್ಸ್ ಬಜೆಟ್ ಹೊಂದಿದ್ದ ಪ್ಯಾರಿಸ್ ಈ ಹಿಂದೆ 1992, 2008 ಹಾಗೂ 2012 ಒಲಿಂಪಿಕ್ಸ್ ಆತಿಥ್ಯದ ಬಿಡ್‌ನಲ್ಲಿ ಸೋತಿತ್ತು. ಪ್ಯಾರಿಸ್, ಸೆ.14: ದಶಕಗಳ ಸಂಪ್ರದಾಯವನ್ನು ಮುರಿದಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ(ಎಲ್‌ಒಸಿ) ಒಂದೇ ಬಾರಿಗೆ ಎರಡು ದೇಶಗಳಿಗೆ ಒಲಿಂಪಿಕ್ಸ್ ಆತಿಥ್ಯದ ಹಕ್ಕನ್ನು ಹಂಚಿಕೆ ಮಾಡಿದೆ.

ಪ್ಯಾರಿಸ್‌ಗೆ 2024ರ ಬೇಸಿಗೆ ಒಲಿಂಪಿಕ್ಸ್ ಹಾಗೂ ಲಾಸ್ ಏಂಜಲೀಸ್‌ಗೆ 2028ರ ಆವೃತ್ತಿಯ ಒಲಿಂಪಿಕ್ಸ್ ಆತಿಥ್ಯದ ಹಕ್ಕನ್ನು ನೀಡಲಾ ಗಿದೆ.

 ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್‌ನ ನಗರಗಳು ಮಾತ್ರ ಒಲಿಂಪಿಕ್ಸ್ ಆತಿಥ್ಯಕ್ಕೆ ಮುಂಗಡವಾಗಿ ಬಿಡ್ ಸಲ್ಲಿಸಿದ್ದು, ಬೇರೆ ದೇಶಗಳು ಸ್ಪರ್ಧೆಯಲ್ಲಿರದ ಹಿನ್ನೆಲೆಯಲ್ಲಿ ಈ ಎರಡು ನಗರಕ್ಕೆ ಆತಿಥ್ಯದ ಹಕ್ಕು ನೀಡಲಾಗಿದೆ.

ಪ್ಯಾರಿಸ್ ಒಂದು ಶತಮಾನದ ಬಳಿಕ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗಿದೆ. 1924ರಲ್ಲಿ ಕೊನೆಯ ಬಾರಿ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಲಾಸ್ ಏಂಜಲಿಸ್ 1932 ಹಾಗೂ 1984ರ ಬಳಿಕ ಮೂರನೆ ಬಾರಿ ಒಲಿಂಪಿಕ್ಸ್‌ನ ಆತಿಥ್ಯದ ಹಕ್ಕು ಪಡೆದಿದೆ.

 ‘‘ಮುಂದಿನ ಏಳು ವರ್ಷಗಳಲ್ಲಿ ನಾವು ಎಲ್ಲ ಹುಮ್ಮಸ್ಸಿನೊಂದಿಗೆ ಒಲಿಂಪಿಕ್ಸ್ ಗೇಮ್ಸ್‌ಗೆ ತಯಾರಿ ನಡೆಸಲಿದ್ದೇವೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ನ್ನು ಯಶಸ್ವಿಯಾಗಿ ನಡೆಸಲು ಸಾಂಘಿಕ ಪ್ರಯತ್ನ ನಡೆಸುತ್ತೇವೆ’’ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಹೇಳಿದ್ದಾರೆ.

2024ರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಿದ್ದ 6 ನಗರಗಳ ಪೈಕಿ ನಾಲ್ಕು ನಗರಗಳಾದ ಬೊಸ್ಟನ್, ಬುಡಾಪೆಸ್ಟ್, ರೋಮ್ ಹಾಗೂ ಹ್ಯಾಂಬರ್ಗ್ ನಗರಗಳು ಬಿಡ್‌ನ್ನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ಐಒಸಿ ಒಂದೇ ಬಾರಿಗೆ ಎರಡು ಗೇಮ್ಸ್‌ನ ಆತಿಥ್ಯದ ಹಕ್ಕನ್ನು ಪ್ರದಾನಿಸಲು ನಿರ್ಧರಿಸಿತ್ತು.

ಎಲ್‌ಒಸಿ 11 ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಎರಡು ಒಲಿಂಪಿಕ್ಸ್ ಗೇಮ್ಸ್ ಆತಿಥ್ಯದ ಹಕ್ಕನ್ನು ನೀಡಿದೆ.

2024ರ ಒಲಿಂಪಿಕ್ಸ್‌ನ ಬಿಡ್‌ನ್ನು ಕೈಬಿಟ್ಟಿರುವ ಲಾಸ್ ಏಂಜಲಿಸ್ 2028ರ ಒಲಿಂಪಿಕ್ಸ್ ಆತಿಥ್ಯಕ್ಕೆ ಆಸಕ್ತಿ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ 2024ರ ಒಲಿಂಪಿಕ್ಸ್‌ಗೆ ಪ್ಯಾರಿಸ್ ಮಾತ್ರ ಸ್ಪರ್ಧೆಯಲ್ಲಿದ್ದ ಕಾರಣ ಅದಕ್ಕೆ ಆತಿಥ್ಯದ ಹಕ್ಕು ಲಭಿಸಿದೆ.

6.8 ಬಿಲಿಯನ್ ಯುರೋಸ್ ಗೇಮ್ಸ್ ಬಜೆಟ್ ಹೊಂದಿದ್ದ ಪ್ಯಾರಿಸ್ ಈ ಹಿಂದೆ 1992, 2008 ಹಾಗೂ 2012 ಒಲಿಂಪಿಕ್ಸ್ ಆತಿಥ್ಯದ ಬಿಡ್‌ನಲ್ಲಿ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News