×
Ad

ಡೇವಿಸ್ ಕಪ್‌ನಲ್ಲಿ ಭಾರತಕ್ಕೆ ಹಿನ್ನಡೆ; ಡಬಲ್ಸ್ ನಲ್ಲಿ ಸೋಲು

Update: 2017-09-17 23:56 IST

ಎಡ್ಮಂಟನ್, ಸೆ.17: ವಿಶ್ವ ಗ್ರೂಪ್ ಡೇವಿಸ್ ಕಪ್ ಟೆನಿಸ್ ಪ್ಲೇ ಆಫ್ ಸುತ್ತಿನಲ್ಲಿ ಕೆನಡಾ ವಿರುದ್ಧ ಭಾರತ 1-2 ಹಿನ್ನಡೆ ಅನುಭವಿಸಿದೆ.

 ಮೊದಲ ದಿನ ಕೆನಡಾ ವಿರುದ್ಧ ಸಮಬಲದ ಹೋರಾಟ ನೀಡಿದ್ದ ಭಾರತ ಎರಡನೆ ದಿನ ಮೇಲುಗೈ ಸಾಧಿಸಲಿಲ್ಲ. ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಪೂರವ್ ರಾಜಾ ಅವರು ಕೆನಡಾದ ಡೇನಿಯೆಲ್ ನೆಸ್ಟರ್ ಮತ್ತು ವಾಸೆಕ್ ಪೊಸ್ಪಿಸಿಲ್ ವಿರುದ್ಧ 5-7, 5-7, 7-5, 3-6 ಅಂತರದಲ್ಲಿ ಸೋಲು ಅನುಭವಿಸಿದರು.

2 ಗಂಟೆ ಮತ್ತು 52 ನಿಮಿಷಗಳ ಕಾಲ ಬೋಪಣ್ಣ ಮತ್ತು ರಾಜಾ ಸೆಣಸಾಡಿದರೂ ಭಾರತಕ್ಕೆ ಗೆಲುವು ದೊರೆಯಲಿಲ್ಲ. ಭಾರತದ ಟೆನಿಸ್ ತಂಡ ಇದೀಗ ಒತ್ತಡಕ್ಕೆ ಸಿಲುಕಿದ್ದು, ವಿಶ್ವ ಗ್ರೂಪ್‌ಗೆ ತೇರ್ಗಡೆಯಾಗಲು ಅಂತಿಮ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಸಿಂಗಲ್ಸ್‌ನಲ್ಲಿ ಯೂಕಿ ಭಾಂಬ್ರಿ ಅವರು ಬ್ರಯಿಡೆನ್ ಚ್ನೂರ್ ಅವರನ್ನು ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಡೆನೀಸ್ ಶಪೊವಾಲೋವ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News