×
Ad

ಬೆಸ್ಟ್ ಲಿಫ್ಟರ್ ಪ್ರಶಸ್ತಿ ಪಡೆದ ಕನ್ನಡಿಗ ಪ್ರದೀಪ್ ಕುಮಾರ್ ಆಚಾರ್ಯ

Update: 2017-09-18 23:32 IST

ಮಂಗಳೂರು, ಸೆ.18: ಸೆ.10 ರಿಂದ 17ರವರೆಗೆ ದಕ್ಷಿಣ ಆಫ್ರಿಕದ ಪೊಟ್ಸೆಪ್‌ಸ್ಟ್ರೂವ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಹಾಗೂ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಪ್ರದೀಪ್ ಕುಮಾರ್ ಆಚಾರ್ಯ 83 ಕೆ.ಜಿ. ದೇಹತೂಕ, ಸೀನಿಯರ್ ವಿಭಾಗದ ಬೆಂಚ್‌ಪ್ರೆಸ್ ಸ್ಪರ್ಧೆಯಲ್ಲಿ 190 ಕೆಜಿ ಬಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಲ್ಲದೆ ಸೀನಿಯರ್ ವಿಭಾಗದ ಬೆಂಚ್‌ಪ್ರೆಸ್ ಸ್ಪರ್ಧೆಯ ಬೆಸ್ಟ್ ಲಿಪ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್ ಇತಿಹಾಸದಲ್ಲೇ ಬಿರುದನ್ನು ಪಡೆದಿರುವ ಮೊದಲ ಭಾರತೀಯರಾಗಿದ್ದಾರೆ.

 ಕೂಟದ ಇನ್ನೊಂದು ಸ್ಪರ್ಧೆಯಾದ ಪವರ್‌ಲಿಫ್ಟಿಂಗ್‌ನಲ್ಲೂ ಭಾಗವಹಿಸಿ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿದ್ದಾರೆ. ಇವರು ಮಂಗಳೂರು ಉರ್ವಾ ಸ್ಟೋರ್ ನಿವಾಸಿಯಾಗಿದ್ದು, ನಗರದ ಬಾಲಾಂಜನೇಯ ಜಿಮೇಶಿಯನ್‌ನಲ್ಲಿ ಸತೀಶ್‌ಕುಮಾರ್ ಕುದ್ರೋಳಿ ಹಾಗೂ ಪ್ರಚೇತ್ ಕೆ. ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ ಹಾಗೂ ನಗರದ ತಲ್‌ವಾಲ್‌ಕರ್ಸ್ ಫಿಟ್‌ನೆಸ್‌ನ ಉದ್ಯೋಗಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News