×
Ad

ಡೇವಿಸ್‌ಕಪ್: ಕೆನಡಾ ವಿರುದ್ಧ ಮುಗ್ಗರಿಸಿದ ಭಾರತ

Update: 2017-09-18 23:54 IST

ಎಡ್ಮೊಂಟನ್, ಸೆ.18: ರಾಮ್‌ಕುಮಾರ್ ರಾಮನಾಥನ್ ಅತ್ಯಂತ ನಿರ್ಣಾಯಕ ನಾಲ್ಕನೆ ಪಂದ್ಯದಲ್ಲಿ ಸೋಲುವುದರೊಂದಿಗೆ ಕೆನಡಾ ವಿರುದ್ಧ ಇಲ್ಲಿ ನಡೆಯುತ್ತಿರುವ ಡೇವಿಸ್‌ಕಪ್ ವರ್ಲ್ಡ್‌ಪ್ಲೇ-ಆಫ್ ಪಂದ್ಯದಲ್ಲಿ 2-3 ರಿಂದ ಭಾರತ ಸೋಲುಂಡಿದೆ.

  ಡೇವಿಸ್‌ಕಪ್ ವರ್ಲ್ಡ್ ಪ್ಲೇ-ಆಫ್ ಪಂದ್ಯದ ಅಂತಿಮ ದಿನವಾದ ರವಿವಾರ ಭಾರತ ಸಮಬಲ ಸಾಧಿಸಲು ರಾಮ್‌ಕುಮಾರ್ ಸಿಂಗಲ್ಸ್ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆದರೆ, ಅವರು ವಿಶ್ವದ ನಂ.51ನೆ ಆಟಗಾರ ಶಪೊವಾಲೊವ್ ವಿರುದ್ಧ 6-3,7-6(1), 6-3 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಯೂಕಿ ಭಾಂಬ್ರಿ ಕೆನಡಾದ ಬ್ರೇಡೆನ್ ಸ್ಚನುರ್ ವಿರುದ್ಧ 6-4, 4-6, 6-4 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರೂ ಭಾರತ ಆತಿಥೇಯರ ವಿರುದ್ಧ ಗ್ರೂಪ್ ವರ್ಲ್ಡ್ ಪ್ಲೇ-ಆಫ್ ಪಂದ್ಯವನ್ನು 2-3 ಅಂತರದಿಂದ ಸೋಲುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

 ಈ ಸೋಲಿನೊಂದಿಗೆ ಭಾರತ ಸತತ ನಾಲ್ಕನೆ ವರ್ಷವೂ ಡೇವಿಸ್‌ಕಪ್‌ನಲ್ಲಿ ಪ್ಲೇ-ಆಫ್ ತಡೆ ದಾಟಲು ವಿಫಲವಾಗಿದೆ. ಕಳೆದ ಮೂರು ಪ್ರಯತ್ನದಲ್ಲಿ ಸರ್ಬಿಯ, ಝೆಕ್ ಗಣರಾಜ್ಯ ಹಾಗೂ ಸ್ಪೇನ್ ವಿರುದ್ಧ ಶರಣಾಗಿತ್ತು.

ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಮೊದಲ ಸುತ್ತಿನಲ್ಲಿ ಗ್ರೇಟ್ ಬ್ರಿಟನ್‌ಗೆ ಸೋಲನುಭವಿಸಿದ್ದ ಕೆನಡಾ 16 ದೇಶಗಳನ್ನೊಳಗೊಂಡ ವರ್ಲ್ಡ್ ಗ್ರೂಪ್‌ನಲ್ಲಿ ಸ್ಥಾನ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News