ಎರಡನೆ ಏಕದಿನ: ಆಸ್ಟ್ರೇಲಿಯಕ್ಕೆ 253 ರನ್ ಗುರಿ ನೀಡಿದ ಭಾರತ

Update: 2017-09-21 12:27 GMT

ಕೋಲ್ಕತಾ, ಸೆ.21: ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬಾರಿಸಿದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಎರಡನೆ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿಗೆ 253 ರನ್ ಗುರಿ ನೀಡಿದೆ.

ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 6ನೆ ಓವರ್‌ನಲ್ಲಿ ರೋಹಿತ್ ಶರ್ಮ(7)ವಿಕೆಟ್ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆದಿತ್ತು.

ಆಗ 2ನೆ ವಿಕೆಟ್‌ಗೆ 102 ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಕೊಹ್ಲಿ(92 ರನ್) ಹಾಗೂ ರಹಾನೆ(55 ರನ್) ತಂಡವನ್ನು ಆಧರಿಸಿದರು.

ರಹಾನೆ ನಿರ್ಗಮನದ ಬಳಿಕ ಕೇದಾರ್ ಜಾಧವ್(24) ಅವರೊಂದಿಗೆ ಕೈ ಜೋಡಿಸಿದ ಕೊಹ್ಲಿ ನಾಲ್ಕನೆ ವಿಕೆಟ್‌ಗೆ 55 ರನ್ ಸೇರಿಸಿದರು.

37ನೆ ಓವರ್‌ನಲ್ಲಿ ಕೊಹ್ಲಿ ಔಟಾದ ಬಳಿಕ ಭಾರತದ ರನ್ ವೇಗಕ್ಕೆ ಕಡಿವಾಣ ಬಿತ್ತು. ಭಾರತ 50 ಓವರ್‌ಗಳಲ್ಲಿ 252 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಆಸ್ಟ್ರೇಲಿಯದ ಪರ ಕೌಲ್ಟರ್ ನೀಲ್(3-51) ಹಾಗೂ ರಿಚರ್ಡ್‌ಸನ್(3-55) ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News