ಆರನೆ ಬಾರಿ ವಿರಾಟ್ ಕೊಹ್ಲಿ ನರ್ವಸ್ ನೈಂಟಿ

Update: 2017-09-21 12:26 GMT

ಕೋಲ್ಕತಾ, ಸೆ.21: ಭಾರತದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ 92 ರನ್ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್ ಫಾರ್ಮ್‌ನ್ನು ಮುಂದುವರಿಸಿದರು. ಆದರೆ, ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು.

ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ರ ಶತಕದ ದಾಖಲೆ(375 ಏಕದಿನ, 30 ಶತಕ)ಮುರಿಯಲು ಕೊಹ್ಲಿಗೆ ಇನ್ನೊಂದು ಶತಕದ ಅಗತ್ಯವಿತ್ತು. ನಥಾನ್ ಕೌಲ್ಟರ್ ನೀಲ್‌ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ ಆರನೆ ಬಾರಿ ನರ್ವಸ್ ನೈಂಟಿಗೆ ಒಳಗಾದರು. ಸಚಿನ್ ತೆಂಡುಲ್ಕರ್‌ಗೆ ನರ್ವಸ್ ನೈಂಟಿ ದಾಖಲೆ ಮುರಿಯುವತ್ತಲೂ ಕೊಹ್ಲಿ ಮುಂದಡಿ ಇಟ್ಟಿದ್ದಾರೆ. ಸಚಿನ್ ವೃತ್ತಿಜೀವನದಲ್ಲಿ 18 ಬಾರಿ ನರ್ವಸ್ ನೈಂಟಿಗೆ ಔಟಾಗಿದ್ದರು.

ಆಸೀಸ್ ವಿರುದ್ಧ 107 ಎಸೆತಗಳ ಇನಿಂಗ್ಸ್‌ನಲ್ಲಿ ಕೊಹ್ಲಿ 8 ಬೌಂಡರಿ ಬಾರಿಸಿದ್ದರು. 37ನೆ ಓವರ್‌ನಲ್ಲಿ ಕೌಲ್ಟರ್ ನೀಲ್ ಬೌಲಿಂಗ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್ ನೀಡಿದರು. ಕೊಹ್ಲಿ 196 ಏಕದಿನಗಳಲ್ಲಿ 30 ಶತಕ ಹಾಗೂ 45 ಅರ್ಧಶತಕಗಳ ಸಹಿತ ಒಟ್ಟು 8,679 ರನ್ ಗಳಿಸಿದ್ದಾರೆ. ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಆಡಿರುವ 23 ಇನಿಂಗ್ಸ್‌ಗಳಲ್ಲಿ ಐದು ಶತಕ ಹಾಗೂ ಐದು ಅರ್ಧಶತಕಗಳ ಸಹಿತ ಒಟ್ಟು 1,092 ರನ್ ಕಲೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News