ಮೂರನೆ ಏಕದಿನ ಪಂದ್ಯ: ಭಾರತಕ್ಕೆ 294 ರನ್ ಸವಾಲು

Update: 2017-09-24 12:03 GMT

 ಇಂದೋರ್, ಸೆ.24: ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಗೆಲುವಿಗೆ 294 ರನ್‌ಗಳ ಸವಾಲು ವಿಧಿಸಿದೆ.

ಟಾಸ್ ಜಯಿಸಿದ ಆಸ್ಟ್ರೇಲಿಯ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 293 ರನ್ ಗಳಿಸಿದೆ.

 ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ ಶತಕ(124) ಗಳಿಸಿದರು. ನಾಯಕ ಸ್ಟೀವ್ ಸ್ಮಿತ್ ಅರ್ಧಶತಕ(63), ಡೇವಿಡ್ ವಾರ್ನರ್ 42 ರನ್, ಮಾರ್ಕೊಸ್ ಸ್ಟೋನಿಸ್ ಔಟಾಗದೆ 27 ರನ್ ಗಳಿಸಿದರು.

83ನೆ ಏಕದಿನ ಪಂದ್ಯವನ್ನಾಡುತ್ತಿರುವ 30 ಹರೆಯದ ಫಿಂಚ್ 110 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 8ನೆ ಶತಕ ಗಳಿಸಿದರು.

ಸ್ಮಿತ್ 101ನೆ ಪಂದ್ಯದಲ್ಲಿ 19ನೆ ಅರ್ಧಶತಕ ಪೂರೈಸಿದರು.

 ಭಾರತದ ಪರ ಕುಲ್‌ದೀಪ್ ಯಾದವ್ ಮತ್ತು ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್, ಯುಜುವೇಂದ್ರ ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News