ಭಾರತಕ್ಕೆ ಸರಣಿ ಗೆಲುವು; ನಂ.1 ಸ್ಥಾನಕ್ಕೆ ಲಗ್ಗೆ

Update: 2017-09-24 16:11 GMT
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 78 ರನ್(72 ಎ, 5ಬೌ, 4ಸಿ

ಇಂದೋರ್, ಸೆ.24: ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ್ದು   ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಪಡೆ ಐದು ಏಕದಿನ ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 294 ಸವಾಲನ್ನು ಪಡೆದ ಭಾರತ ಇನ್ನೂ ಎಸೆತಗಳು 13  ಬಾಕಿ ಇರುವಾಗಲೇ  5 ವಿಕೆಟ್ ನಷ್ಟದಲ್ಲಿ  ಅಗತ್ಯ ರನ್ ಗಳಿಸಿ  ಗೆಲುವಿನ ದಡ ಸೇರಿತು. ಸರಣಿ ಗೆಲುವಿನೊಂದಿಗೆ ಭಾರತ ಐಸಿಸಿ ಏಕದಿನ ಕ್ರಿಕೆಟ್ ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

 ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 78 ರನ್(72 ಎ, 5ಬೌ, 4ಸಿ) ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ(71) ಮತ್ತು ಅಜಿಂಕ್ಯ ರಹಾನೆ(70) ಅವರ ಅರ್ಧಶತಕಗಳ ನೆರವಿನಲ್ಲಿ ಭಾರತ ಗೆಲುವಿನ ದಡ ಸೇರಿತು.

    ಮನೀಷ್ ಪಾಂಡೆ ಔಟಾಗದೆ 36 ರನ್ , ಎಂಎಸ್ ಧೋನಿ ಔಟಾಗದೆ  3 ರನ್ ,  ವಿರಾಟ್ ಕೊಹ್ಲಿ 28 ರನ್, ಮತ್ತು ಕೇದಾರ್ ಜಾಧವ್ 2 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News