ವೋಝ್ನಿಯಾಕಿಗೆ ಟ್ರೋಫಿ

Update: 2017-09-24 18:09 GMT

ಟೋಕಿಯೊ, ಸೆ.24: ರಶ್ಯದ ಅನಸ್ತೇಸಿಯಾ ಪಾವ್ಲಚೆಂಕೊವಾ ವಿರುದ್ಧ ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಡೆನ್ಮಾರ್ಕ್‌ನ ಕರೋಲಿನ್ ವೋಝ್ನಿಯಾಕಿ ಪಾನ್ ಫೆಸಿಫಿಕ್ ಟೆನಿಸ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

 ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮಾಜಿ ನಂ.1 ಆಟಗಾರ್ತಿ ವೋಝ್ನಿಯಾಕಿ ಅವರು ಅನಸ್ತೇಸಿಯಾರನ್ನು 6-0, 7-5 ಅಂತರದಿಂದ ಮಣಿಸಿದರು. ಈ ವರ್ಷ ಏಳನೆ ಬಾರಿ ಫೈನಲ್‌ಗೆ ತಲುಪಿರುವ ವೋಝ್ನಿಯಾಕಿ ಕೊನೆಗೂ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ಆರು ಬಾರಿ ಫೈನಲ್‌ಗೆ ಮುಗ್ಗರಿಸಿದ್ದರು. ವೋಝ್ನಿಯಾಕಿ ಮೂರನೆ ಬಾರಿ ಪಾನ್ ಪೆಸಿಫಿಕ್ ಓಪನ್ ಟ್ರೋಫಿ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News