ಐದನೆ ಏಕದಿನ: ರೋಹಿತ್ ಶರ್ಮ 14ನೆ ಶತಕ
Update: 2017-10-01 20:15 IST
ನಾಗ್ಪುರ, ಅ.1: ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಅವರು ಆಸ್ಟ್ರೇಲಿಯ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಶತಕ ದಾಖಲಿಸಿದರು.
ವಿಸಿಎ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮ 168ನೆ ಏಕದಿನ ಪಂದ್ಯದಲ್ಲಿ ತನ್ನ 14ನೆ ಶತಕ ದಾಖಲಿಸಿದರು.
94 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ಗೆಲುವಿಗೆ 243 ರನ್‌ಗಳ ಸವಾಲನ್ನು ಪಡೆದ ಭಾರತಕ್ಕೆ ಶರ್ಮ ಮತ್ತು ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 123 ರನ್‌ಗಳ ಜೊತೆಯಾಟ ನೀಡಿದರು.
ರಹಾನೆ 41ನೆ ಏಕದಿನ ಪಂದ್ಯದಲ್ಲಿ 13ನೆ ಅರ್ಧಶತಕ (61) ದಾಖಲಿಸಿ ಔಟಾದರು.
ಶತಕ ದಾಖಲಿಸಿರುವ ರೋಹಿತ್ ಶರ್ಮ ಅವರು ನಾಯಕ ವಿರಾಟ್ ಕೊಹ್ಲಿ ಜೊತೆ ಎರಡನೆ ವಿಕೆಟ್‌ಗೆ ಜೊತೆಯಾಟ ಮುಂದುವರಿಸಿದ್ದಾರೆ.