ಫಿಫಾ ಅಂಡರ್ -17 ವಿಶ್ವಕಪ್: ಚೊಚ್ಚಲ ಪ್ರವೇಶದಲ್ಲೇ ಭಾರತಕ್ಕೆ ಹೀನಾಯ ಸೋಲು
Update: 2017-10-06 22:20 IST
ಹೊಸದಿಲ್ಲಿ, ಅ.6: ಫಿಫಾ ಅಂಡರ್ -17 ಫುಟ್ಬಾಲ್ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಭಾರತ ಇಂದು ಅಮೆರಿಕ ವಿರುದ್ಧ 0-3 ಅಂತರದಲ್ಲಿ ಸೋಲು ಅನುಭವಿಸಿದೆ.
ಹೊಸದಿಲ್ಲಿಯ ಜವಾಹರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರರಿಂದ ಒಂದು ಗೋಲು ದಾಖಲಾಗಲಿಲ್ಲ
ಅಮೆರಿಕ ತಂಡದ ಜೋಶ್ ಸಾರ್ಜೆಂಟ್ (30ನೆ ನಿಮಿಷ), ಕ್ರಿಸ್ ಡರ್ಕಿನ್ (51 ನಿ.) ಮತ್ತು ಆ್ಯಂಡ್ರೆ ಕಾರ್ಲೆಟನ್ (84ನೆ ನಿ.) ಗೋಲು ದಾಖಲಿಸಿ ಅಮೆರಿಕ ತಂಡದ ಗೆಲುವಿಗೆ ನೆರವಾದರು.