×
Ad

ರಾಂಚಿಯಲ್ಲಿ ಭಾರತಕ್ಕೆ ಜಯ

Update: 2017-10-07 22:52 IST

ರಾಂಚಿ,ಅ.7: ಇಲ್ಲಿನ ಜೆಎಸ್ ಸಿಎ ಇಂಟರ್ ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆದ  ಆಸ್ಟ್ರೇಲಿಯ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದೆ.

ಮಳೆ ಬಾಧಿತ ಪಂದ್ಯದಲ್ಲಿ ಡಕ್ ವರ್ಥ್ ಲೂವಿಸ್ ನಿಯಮದಂತೆ ಗೆಲುವಿಗೆ 6 ಓವರ್ ಗಳಲ್ಲಿ 48 ರನ್ ಗಳಿಸಬೇಕಾದ ಭಾರತ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 49 ರನ್ ಗಳಿಸಿತು.

ಭಾರತದ ನಾಯಕ ವಿರಾಟ್ ಕೊಹ್ಲಿ ಔಟಾಗದೆ 22 ರನ್, ಶಿಖರ್ ಧವನ್ ಔಟಾಗದೆ 15ರನ್ ಮತ್ತು ರೋಹಿತ್ ಶರ್ಮ 11 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News