ರೊಹಿಂಗ್ಯಾ ಶಿಬಿರದ ಮೇಲೆ ಕಾಡಾನೆಗಳ ದಾಳಿ: 3 ಬಲಿ

Update: 2017-10-15 16:51 GMT

ಢಾಕಾ,ಆ.15: ರೊಹಿಂಗ್ಯಾ ಸಂತ್ರಸ್ತರ ನೂತನ ಶಿಬಿರವೊಂದರ ಮೇಲೆ ಕಾಡಾನೆಗಳು ನಡೆಸಿದ ದಾಳಿಗೆ ಓರ್ವ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಬಲಿಯಾದ ಘಟನೆ ದಕ್ಷಿಣ ಬಾಂಗ್ಲಾದೇಶದಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.

  ಉಖಿಯಾ ಪಟ್ಟಣದಲ್ಲಿರುವ ಬಲುಕುಲಿ ನಿರಾಶ್ರಿತ ಶಿಬಿರದ ಮೇಲೆ ಶನಿವಾರ ನಸುಕಿನಲ್ಲಿ ಕಾಡಾನೆಗಳು ನುಗ್ಗಿದ್ದವು. ಹಲವಾರು ರೊಹಿಂಗ್ಯಾ ನಿರಾಶ್ರಿತರು ನಿದ್ರಿಸುತ್ತಿದ್ದ ಶಿಬಿರವನ್ನು ಆನೆಗಳು ಕೆಡವಿ, ತುಳಿದುಹಾಕಿರುವುದಾಗಿ ಜಿಲ್ಲಾ ಅರಣ್ಯ ಅಧಿಕಾರಿ ಮುಹಮ್ಮದ್ ಅಲಿ ಕಬೀರ್ ತಿಳಿಸಿದ್ದಾರೆ.ಆನೆಗಳ ದಾಂಧಲೆಯಲ್ಲಿ ಇತರ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಹಲವರು ಸುರಕ್ಷತೆಗೆ ಶಿಬಿರದಿಂದ ಪಲಾಯನಗೈದಿದ್ದಾರೆಂದು ತಿಳಿದುಬಂದಿದೆ.

 ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ನಿಂದ ಸಹಸ್ರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿರುವ ರೊಹಿಂಗ್ಯಾಗಳಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವುದಕ್ಕಾಗಿ ಬಲುಕಾಲಿಯ ಬೆಟ್ಟಪ್ರದೇಶಗಳಲ್ಲಿರುವ ಸಾವಿರಾರು ಮರಗಳನ್ನು ಕಡಿದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾಕ್ಸ್‌ಬಝಾರ್ ಜಿಲ್ಲೆಯಲ್ಲಿ ಕಾಡಾನೆಗಳು ರೊಹಿಂಗ್ಯಾ ನಿರಾಶ್ರಿತ ಶಿಬಿರಗಳ ಮೇಲೆ ದಾಳಿ ನಡೆಸಿದ ಮೂರನೆ ಘಟನೆ ಇದಾಗಿದೆ.ರೊಹಿಂಗ್ಯಾ ಶಿಬಿರಗಳ ಮೇಲೆ ಕಾಡಾನೆಗಳು ಈ ಹಿಂದೆ ನಡೆಸಿದ ಎರಡು ದಾಳಿಗಳಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News