ವರ್ಜಿನಿಯ ವಿವಿಯಲ್ಲಿ ಶೂಟೌಟ್: ಓರ್ವನಿಗೆ ಗಾಯ

Update: 2017-10-15 17:37 GMT

ವಾಶಿಂಗ್ಟನ್,ಅ.15: ಲಾಸ್‌ವೆಗಾಸ್‌ನಲ್ಲಿ 50ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಶೂಟೌಟ್ ಘಟನೆಯ ಕರಾಳನೆನಪು ಮಾಸಿಹೋಗುವ ಮುನ್ನವೇ ವರ್ಜಿನಿಯ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ತಡರಾತ್ರಿ ಗುಂಡುಹಾರಾಟ ನಡೆದಿದ್ದು, ಓರ್ವ ಗಾಯಗೊಂಡಿದ್ದಾನೆ.

ಘಟನೆಯ ಬಳಿಕ ವಿಶ್ವವಿದ್ಯಾನಿಲಯವನ್ನು ಮುಚ್ಚಲಾಗಿದ್ದು, ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿರುವುದಾಗಿ ಮೂಲಗಳು ತಿಳಿಸಿವೆ. ಬಿಳಿಬಣ್ಣದ ಜೆರ್ಸಿ ಉಡುಪನ್ನು ಧರಿಸಿದ್ದ ಯುವಕನೊಬ್ಬ ಗುಂಡುಹಾರಾಟ ನಡೆಸಿರುವುದಾಗಿ ಶಂಕಿಸಲಾಗಿದೆಯೆಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News