ಅಫ್ಘಾನ್‌ಗೆ ಏಶ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಸದಸ್ಯತ್ವ

Update: 2017-10-15 17:39 GMT

ಕಾಬೂಲ್, ಅ.15: ಅಫ್ಘಾನಿಸ್ತಾನವು ಏಶ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ)ಯ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆಯೆಂದು ಹಣಕಾಸು ಸಚಿವಾಲಯವು ರವಿವಾರ ಘೋಷಿಸಿದೆ.

 ವಾಶಿಂಗ್ಟನ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮಹಾಸಭೆ ನಡೆದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ವಿತ್ತ ಸಚಿವ ಎಕ್ಲಿಲ್ ಹಕೀಮಿ ಅವರು ತನ್ನ ದೇಶಕ್ಕೆ ಎಐಐಬಿಯ ಖಾಯಂ ಸದಸ್ಯತ್ವವನ್ನು ಸ್ವೀಕರಿಸಿದರೆಂದು ಅಫ್ಘಾನಿಸ್ತಾನದ ವಿತ್ತ ಸಚಿವಾಲಯ ಹೇಳಿಕೆಯೊಂದರಲ್ಲಿ ಘೋಷಿಸಿದೆ.

ಬ್ಯಾಂಕ್‌ನಲ್ಲಿ ಅಫ್ಘಾನಿಸ್ತಾನದ ಸದಸ್ಯತ್ವವು ಅತ್ಯಂತ ಪ್ರಮುಖವಾದುದಾಗಿದೆ. ಬೃಹತ್ ರಾಷ್ಟ್ರೀಯ ಯೋಜನೆಗಳ ಅನುಷ್ಠಾನಕ್ಕೆ ಇದರಿಂದ ಹಾದಿ ಸುಗಮವಾಗಲಿದೆಯೆಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News