ಕುಂಬ್ಳೆಗೆ ಅಗೌರವ ತೋರಿಸಿದ ಬಿಸಿಸಿಐಗೆ ಅಭಿಮಾನಿಗಳ ಟೀಕೆ ...!

Update: 2017-10-17 12:05 GMT

ಹೊಸದಿಲ್ಲಿ, ಅ.17: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಅವರಿಗೆ 47ನೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ‘‘ಸಾಮಾನ್ಯ ರೀತಿಯಲ್ಲಿ ’’ ಶುಭಾಶಯ ಕೋರಿದ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಟೀಕೆಗೆ ಒಳಗಾಗಿದೆ.

    ಸ್ಪಿನ್ ಮಾಂತ್ರಿಕ ಕುಂಬ್ಳೆ ಅವರಿಗೆ ಟ್ವಿಟರ್‌ನಲ್ಲಿ ಶುಭಾಶಯ ಕೋರುವಾಗ ‘‘ ಮಾಜಿ ಬೌಲರ್’’ ಎಂದು ಬಿಂಬಿಸುವ ಮೂಲಕ ಅವರನ್ನು ಅವಮಾನಿಸಿದೆ ಎಂದು ಅಭಿಮಾನಿಗಳು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಿಲ್ ಕುಂಬ್ಳೆ ಕಳೆದ ಜೂನ್‌ನಲ್ಲಿ ಟೀಮ್ ಇಂಡಿಯಾ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು. ಅವರು ಕೋಚ್ ಹುದ್ದೆ ತ್ಯಜಿಸುವಾಗ ನಾಯಕ ವಿರಾಟ್ ಕೊಹ್ಲಿ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ಹೇಳಲಾಗಿತ್ತು.

   ಕುಂಬ್ಳೆ ಅವರು ಕೋಚ್ ಹುದ್ದೆಯನ್ನು ತ್ಯಜಿಸುವಾಗ ಬಿಸಿಸಿಐ ಜೊತೆಗೂ ಸಂಬಂಧ ಚೆನ್ನಾಗಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾೆು ನೀಡಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಕುಂಬ್ಳೆ ಅವರಿಗೆ ಅಗೌರವ ತೋರಿಸಿದ ಬಿಸಿಸಿಐಗೆ ಅಭಿಮಾನಿಗಳಿಂದ ಚಾಡಿಯೇಟು ಟ್ವಿಟರ್‌ನಲ್ಲಿ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಸಿಸಿಐ ತನ್ನ ಟ್ವಿಟರ್ ಪೋಸ್ಟ್‌ನ್ನು ಅಳಿಸಿ ಹಾಕಿ. ಹೊಸ ಪೋಸ್ಟ್ ಹಾಕಿದೆ ಎಂದು ತಿಳಿದು ಬಂದಿದೆ.

ಕುಂಬ್ಳೆ 17 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಟೀಮ್ ಇಂಡಿಯಾ ಪರ 132 ಟೆಸ್ಟ್‌ಗಳನ್ನು ಆಡಿದ್ದರು. 619 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News