ಪಾಕ್: ಅಮೆರಿಕದ ಡ್ರೋನ್ ದಾಳಿಯಲ್ಲಿ 26 ಹಕ್ಕಾನಿ ನೆಟ್‌ವರ್ಕ್ ಉಗ್ರರ ಸಾವು

Update: 2017-10-17 16:57 GMT

ಪೇಶಾವರ (ಪಾಕಿಸ್ತಾನ), ಅ. 17: ಪಾಕಿಸ್ತಾನದಲ್ಲಿರುವ ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕ ಗುಂಪು ಬಳಸುತ್ತಿದ್ದ ಕಟ್ಟಡವೊಂದರ ಮೇಲೆ ಅಮೆರಿಕ ಸೋಮವಾರ ನಡೆಸಿದ ಡ್ರೋನ್ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ದುರ್ಗಮ ಬುಡಕಟ್ಟು ಜಿಲ್ಲೆ ಕುರ್ರಮ್‌ನಲ್ಲಿ ನಡೆಯುತ್ತಿದ್ದ ಹಕ್ಕಾನಿ ನೆಟ್‌ವರ್ಕ್‌ನ ಭಯೋತ್ಪಾದಕರ ಸಭೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.

‘‘ಮೊದಲ ಡ್ರೋನ್ ದಾಳಿಯಲ್ಲಿ ಹಕ್ಕಾನಿ ನೆಟ್‌ವರ್ಕ್‌ನ ಐವರು ಉಗ್ರರು ಮೃತಪಟ್ಟರು ಹಾಗೂ ನಿಮಿಷಗಳ ಬಳಿಕ, ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರದೆಗೆಯಲು ಬಂದ ಉಗ್ರರನ್ನು ಗುರಿಯಾಗಿಸಿ ಎರಡನೆ ಡ್ರೋನ್ ಇನ್ನೂ ಎರಡು ಕ್ಷಿಪಣಿಗಳನ್ನು ಸಿಡಿಸಿತು’’ ಎಂದು ಕುರ್ರಮ್‌ನಲ್ಲಿರುವ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

‘‘ಈವರೆಗೆ 26 ದೇಹಗಳನ್ನು ಹೊರದೆಗೆಯಲಾಗಿದೆ ಹಾಗೂ ಡ್ರೋನ್‌ಗಳು ಇನ್ನೂ ಆಕಾಶದಲ್ಲಿ ಹಾರಾಡುತ್ತಿವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News