ಕ್ಯಾಟಲೋನಿಯ ಜನಮತಗಣನೆ ಅಕ್ರಮ: ಸ್ಪೇನ್ ಸಾಂವಿಧಾನಿಕ ನ್ಯಾಯಾಲಯ

Update: 2017-10-17 17:16 GMT

ಮ್ಯಾಡ್ರಿಡ್ (ಸ್ಪೇನ್), ಅ. 17: ಕ್ಯಾಟಲೋನಿಯದ ವಿವಾದಾಸ್ಪದ ಸ್ವಾತಂತ್ರ ಜನಮತಗಣನೆ ಅಕ್ರಮವಾಗಿದೆ ಎಂದು ಸ್ಪೇನ್‌ನ ಸಾಂವಿಧಾನಿಕ ನ್ಯಾಯಾಲಯ ಹೇಳಿದೆ. ಯಾಕೆಂದರೆ, ಜನಮತಗಣನೆಗೆ ಅವಕಾಶ ನೀಡಿರುವ ಪ್ರಾದೇಶಿಕ ಕಾನೂನು ಸ್ಪೇನ್‌ನ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಕ್ಯಾಟಲೋನಿಯದ ಪ್ರಾದೇಶಿಕ ಸಂಸತ್ತು ಸೆಪ್ಟಂಬರ್ ಆದಿ ಭಾಗದಲ್ಲಿ ‘ಸ್ವನಿರ್ಣಯ ಜನಮತಗಣನೆ ಕಾನೂನು’ನ್ನು ಅಂಗೀಕರಿಸಿತ್ತು.

ಕ್ಯಾಟಲೋನಿಯವು ಸ್ಪೇನ್‌ನಿಂದ ಪ್ರತ್ಯೇಕಗೊಳ್ಳಬೇಕೇ ಎಂಬುದನ್ನು ತೀರ್ಮಾನಿಸುವ ಜನಮತಗಣನೆ ಅಕ್ಟೋಬರ್ 1ರಂದು ನಡೆದಿತ್ತು. ಬಹುಮತವು ಕ್ಯಾಟಲೋನಿಯವು ಪ್ರತ್ಯೇಕಗೊಳ್ಳಬೇಕು ಎಂಬುದರ ಪರವಾಗಿತ್ತು ಎಂದು ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News