ಏಷ್ಯಾ ಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2017-10-19 15:27 GMT

ಢಾಕಾ, ಅ.19: ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನ ಸೂಪರ್ -4 ಪಂದ್ಯದಲ್ಲಿ ಇಂದು ಮಲೇಷ್ಯಾದ ವಿರುದ್ಧ ಭಾರತ 6-2 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.

ಭಾರತ ಈ ಗೆಲುವಿನೊಂದಿಗೆ ಎರಡು ಪಂದ್ಯಗಳಲ್ಲಿ 4 ಅಂಕ ಗಳಿಸಿ ಸೂಪರ್ -4 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಬುಧವಾರ 1-1 ಸಮಬಲ ಸಾಧಿಸಿದ್ದ ಭಾರತ ಇಂದು ಉತ್ತಮ ಪ್ರದರ್ಶನದ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.

ಭಾರತದ ಪರ ಆಕಾಶ್‌ದೀಪ್, ಎಸ್.ಕೆ.ಉತ್ತಪ್ಪ, ಗುರ್ಜಂತ್ ಸಿಂಗ್, ಎಸ್.ವಿ. ಸುನೀಲ್, ಸರ್ದಾರ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ತಲಾ 1 ಗೋಲು ದಾಖಲಿಸಿದರು.

 ಮಲೇಷ್ಯಾದ ರಾಝಿ ರಹ್ಮಾನ್ ಮತ್ತು ರಾಮದನ್  ರೋಸ್ಲಿ ತಲಾ 1 ಗೋಲು ಜಮೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News