×
Ad

ಮುಂದಿನ ವಾರ ಟಿಲರ್‌ಸನ್ ಭಾರತ, ಪಾಕ್ ಭೇಟಿ

Update: 2017-10-20 22:15 IST

ವಾಶಿಂಗ್ಟನ್, ಅ. 20: ತನ್ನ ಐದು ದೇಶಗಳ ಪ್ರವಾಸ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಮುಂದಿನ ವಾರ ಭಾರತ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.

ಈ ಪ್ರವಾಸದ ಅವಧಿಯಲ್ಲಿ ಅವರು ಸೌದಿ ಅರೇಬಿಯ, ಕತರ್ ಮತ್ತು ಸ್ವಿಟ್ಸರ್‌ಲ್ಯಾಂಡ್‌ಗೂ ಹೋಗಲಿದ್ದಾರೆ.

ನಾಳೆಯಿಂದ ಆರಂಭಗೊಳ್ಳುವ ಪ್ರವಾಸದ ಮೊದಲ ಹಂತದಲ್ಲಿ ಅವರು ಸೌದಿ ಅರೇಬಿಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕತರ್‌ಗೆ ಹೋಗಲಿರುವ ಅವರು, ನಂತರದ ಹಂತಗಳಲ್ಲಿ ಪಾಕಿಸ್ತಾನ ಮತ್ತು ಭಾರತಕ್ಕೆ ಬರುತ್ತಾರೆ.

ಭಾರತ ಮತ್ತು ಪಾಕಿಸ್ತಾನಕ್ಕೆ ಅವರು ನೀಡಲಿರುವ ಭೇಟಿಯ ನಿರ್ದಿಷ್ಟ ದಿನಾಂಕ ಅಂತಿಮಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News